Belagavi News In Kannada | News Belgaum

ಖಾನಪುರದಲ್ಲಿಅಬ್ಬರದ ಪ್ರಚಾರ ನಡೆಸಿದ ಬೆಳಗಾವಿ ಶಾಸಕ ಅನಿಲ ಬೆನಕೆ

ಬೆಳಗಾವಿ,  ದಿನಾಂಕ 02-12-2021 ರಂದು  ದಿನ   ದಿಂದ ದಿನಕ್ಕೆ ವಿಧಾನ ಪರಿಷತ  ಚುನಾವಣೆ  ರಂಗೆರುತ್ತಿದೆ.  ಬೆಳಗಾವಿ ವಿಧಾನದ ಪರಿಷತ ಗಾದಿಗಾಗಿ ತ್ರಿಕೋನ ಸ್ಪರ್ಧೆಏರ್ಪಟ್ಟಿದ್ದು, ಬಿಜೆಪಿ, ಕಾಂಗ್ರೆಸ ಮತ್ತು ಪಕ್ಷೇತರ ಪಕ್ಷಗಳು ಅಬ್ಬರದ ಪ್ರಚಾರ ಕೈಗೋಳ್ಳುತ್ತಿದ್ದಾರೆ.


ಹೌದು..! ಬಿಜೆಪಿ ಪಾಳ್ಯಯದಲ್ಲಿ ಘಟಾನುಘಟಿ ನಾಯಕರು ಪಿಲ್ಡಿಗೆ ಇಳಿದಿದ್ದು, ಪ್ರಚಾರ  ಜೋರಾಗಿದೆ.ಅದರಂತೆಇಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರುಕಾಂಗ್ರೆಸ ಭದ್ರಕೋಟೆಆಗಿರುವ  ಖಾನಾಪೂರ  ಕ್ಷೇತ್ರದಲ್ಲಿ ಸಭೆ ಮಾಡಿ, ಬಿಜೆಪಿ ಅಭ್ಯರ್ತಿ ಮಹಾಂತೇಶ  ಕವಟಗಿಮಠ  ಅವರ ಪರವಾಗಿ ಭರ್ಜರಿ ಮತ ಬೇಟೆ ನಡೆಸಿದ್ದಾರೆ.

ಖಾನಾಪುರ  ತಾಲೂಕಿನ  ವಿವಿಧ ಗ್ರಾಮಗಳಲ್ಲಿ ತಾಲೂಕು ಪಂಚಾಯತಿ ಸದಸ್ಯರಜೊತೆ ಸಭೆ ನಡೆಸಿದ ಶಾಸಕ ಅನಿಲ ಬೆನಕೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರಅಭಿವೃದ್ದಿ ಕೆಲಸವನ್ನು ಹೇಳಿ ಮೊದಲ ಮತವನ್ನು ಬಿಜೆಪಿ ಅಭ್ಯರ್ಥಿ ಮಹಾಂತೇಶ  ಕವಟಗಿಮಠಅವರಿಗೆ ನೀಡುವಂತೆ ತಿಳಿಸಿದರು.
ಈ ವೇಳೆ ಬಿಜೆಪಿ ಮುಖಂಡರು ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.