Belagavi News In Kannada | News Belgaum

ಬಿಜೆಪಿಯೇ ಹಿರಿಯ ನಾಯಕರನ್ನ ಕಡೆಗಣಿಸಿದೆ : ಶಾಸಕ ಎನ್.ಎ.ಹ್ಯಾರಿಸ್

ಗೋಕಾಕ : ಬಿಜೆಪಿ ಪಕ್ಷ ಹಿರಿಯ ನಾಯಕರನ್ನು ಕಡೆಗಣಿಸಿದೆಯೇ ವಿನಹಃ ಕಾಂಗ್ರೆಸ್ ಪಕ್ಷವಲ್ಲ ಎಂದು  ಶಾಸಕ ಎನ್.ಎ.ಹ್ಯಾರಿಸ್ ಟಾಂಗ್ ನೀಡಿದ್ದಾರೆ.

ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ನಡೆದ ಮುಖಂಡರ ಸಭೆ ಬಳಿಕ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ,  ಕಾಂಗ್ರೆಸ್ ಪಕ್ಷ ಹಿರಿಯ ನಾಯಕರನ್ನು ಯಾವತ್ತು ಕಡೆಗಣಿಸಿಲ್ಲ. ಬಿಜೆಪಿಯೇ ತಮ್ಮ ಹಿರಿಯ ನಾಯಕರನ್ನ ಕಡೆಗಣನೆ ಮಾಡಿದೆ  ಎಂದಿದ್ದಾರೆ.

ಪಕ್ಷವನ್ನು ಗೆಲ್ಲಿಸಬೇಕೆಂದು ಅಭ್ಯರ್ಥಿ ಹೆಸರು ಘೋಷಣೆಗೂ ಮೊದಲೇ  ಕೆಲಸ ಮಾಡಲು ಪ್ರಾರಂಭಿಸಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಪ್ರಯತ್ನಿಸುತ್ತೇವೆ. ಅಭ್ಯರ್ಥಿ ಘೋಷಣೆ ಮೊದಲು ಟಿಕೆಟ್ ಬೇಡಿಕೆ ಸಹಜವೆಂದರು.

ಪಕ್ಷ ಟಿಕೆಟ್ ಯಾರಿಗೆ ಕೊಡುತ್ತಾರೋ ಅವರ ಪರ ಕೆಲಸ ಮಾಡುತ್ತಿವೆ. ಹಾಗೇ ಪ್ರಕಾಶ್ ಹುಕ್ಕೇರಿ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಅವರ ಕ್ಷೇತ್ರದಲ್ಲಿ ಹೆಚ್ಚಿನ ಮತಗಳ ಬರಲಿವೆ ಎಂಬ ಭರವಸೆ ಇದೆ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಖಂಡಿತ ಗೆಲ್ಲುತ್ತಾರೆ. ಆದರೆ ಎಷ್ಟು ಮತಗಳನ್ನು ಹೆಚ್ಚು ಪಡೆಯಬಹುದು ಎಂಬುವುದರ ಬಗ್ಗೆ ಚರ್ಚೆ ಮಾಡಿ, ಕಾರ್ಯ ರೂಪಗಳನ್ನು ಸರಿಪಡಿಸುತ್ತಿದ್ದೇವೆ. ತಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಬಿಜೆಪಿ ಪಕ್ಷದಲ್ಲಿ ಇಬ್ಬರು ಸ್ಪರ್ಧೆ ಮಾಡಿದ್ದಾರೆ. ಅವರಿಬ್ಬರಲ್ಲಿ ಯಾರು ಗೆಲ್ಲುತ್ತಾರೆಂದು ಗೊತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷದಿಂದ ನಮ್ಮ ಅಭ್ಯರ್ಥಿ ಗೆಲ್ಲುವುದು ಗ್ಯಾರಂಟಿ ಎಂದು ಹೇಳಿದರು./////