Belagavi News In Kannada | News Belgaum

ಕೈದಿಗಳಿಗೆ ಮನ ಪರಿವರ್ತನೆ-ಅಪರಾದ ತಡೆ ಬಗ್ಗೆ ಕಾರ್ಯಾಗಾರ

ಗೋಕಾಕ: ಸ್ರ್ತೀ ಶಕ್ತಿಧಾಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಣ್ಣೂರ ಇವರ ಸಹಯೋಗದಲ್ಲಿಗೋಕಾಕ ಕಾರಾಗೃಹದಲ್ಲಿಜೈಲರ್ ಅಂಬರೀಶ ಪೂಜಾರಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕೈದಿಗಳಿಗೆ ಮನ ಪರಿವರ್ತನೆ ಮತ್ತು ಅಪರಾದ ತಡೆ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು.

ಕಾರ್ಯಾಗಾರದಲ್ಲಿಮೇನದ ಬತ್ತಿ ಮತ್ತು ಅಗರ ಬತ್ತಿ ತಯಾರಿಕೆ ಬಗ್ಗೆ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಸ್ರ್ತೀ ಶಕ್ತಿಧಾಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮಂಜುಳಾ ರಾಮಗನಟ್ಟಿಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಮಹಿಳಾ ಕಾರ್ಯಕರ್ತೆ ರೇಖಾ ಕಂಬಾರ, ತರಬೇತಿದಾರ ರಮೇಶ ಮಾದರ, ಮಣಿಕಂಠ  ರಾಮಗನಟ್ಟಿ ಸೇರಿದಂತೆ ಜೈಲಿನ ಸಿಬ್ಬಂದಿ ಉಪಸ್ಥಿತರಿದ್ದರು.//////