Belagavi News In Kannada | News Belgaum

ನವಜಾತ ಶಿಶುವನ್ನು ಪೊದೆಗೆ ಎಸೆದು ಓಡಿಹೋಗಿದ್ದ ಪಾಪಿ ಪೋಷಕರ ಬಂಧನ

ಉಡುಪಿ : ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಪೊದೆಗೆ ಎಸೆದು ಎಸ್ಕೆಪ್  ಆಗಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲ್ಲೂರು ಜಡ್ಕಲಿನ ರಾಧಾ (40) ಹಾಗೂ ಸತೀಶ್ (43) ಎಂಬಾತರನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಎಸ್ಟೇಟೊಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು.

ಈ ಮೊದಲು ಆರೋಪಿಗಳು ಮದುವೆಯಾಗಿ ತಮ್ಮ ಪತಿ, ಪತ್ನಿಯಿಂದ ದೂರವಿದ್ದರು. ಆ ಬಳಿಕ ರಾಧಾ ಸತೀಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಈ ವೇಳೆ ಗರ್ಭಿಣಿಯಾಗಿದ್ದ ರಾಧಾ, ಹಾಲಾಡಿ ಬಳಿಯ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.

ಬಳಿಕ ಮಗು ಬೇಡವೆಂದು ನಿರ್ಧರಿಸಿದ ಇವರಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಮಗುವನ್ನು ಪೊದೆಗೆ ಎಸೆದು ಹೋಗಿದ್ದರು.ಈ ಬಗ್ಗೆ ತನಿಖೆ ನಡೆಸಿದ ಅಮಾಸೆಬೈಲು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ./////