Belagavi News In Kannada | News Belgaum

ವಿಧಾನಪರಿಷತ್ ಗೆ ಆಯ್ಕೆಯಾದ್ರೆ ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಒತ್ತು

ಬೆಳಗಾವಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಹೆಚ್ಚೆಚ್ಚು ಅನುದಾನ ತಂದು ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡಿ ಮಾದರಿ ಹಳ್ಳಿಗಳನ್ನಾಗಿ ರೂಪಿಸಲಾಗುವುದು ಎಂದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಯಳ್ಳೂರ ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿಯಾಗಿ ಮತಯಾಚಿಸಿದ ಬಳಿಕ ಅವರು ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಈಗ ಗ್ರಾಮ ಪಂಚಾಯತ್‍ಗಳಿಗೆ ಬರುತ್ತಿರುವ ಅನುದಾನಕ್ಕಿಂತಲೂ ಅತಿ ಹೆಚ್ಚು ಅನುದಾನ ತರಲು ವಿಶೇಷ ಪ್ರಯತ್ನ ಮಾಡಲಾಗುವುದು. ಗ್ರಾಮ ಪಂಚಾಯತ್‍ನ ಪ್ರತಿಯೊಂದು ವಾರ್ಡ್‍ನಲ್ಲಿಯೂ ಆಯಾ ಸದಸ್ಯರು ಅಭಿವೃದ್ಧಿ ಕೆಲಸಗಳನ್ನು ಮಾಡಲು ಬೇಕಾಗುವ ಅಗತ್ಯ ಅನುದಾನ ಸರ್ಕಾರದಿಂದ ತರುವ ಜವಾಬ್ದಾರಿ ನನ್ನದು ಎಂದು ಹೇಳಿದರು.

ಜನರ ಸೇವೆ ಸದಾ ದುಡಿಯುತ್ತಿರುವ ಜಾರಕಿಹೊಳಿ ಕುಟುಂಬ ಇನ್ನು ಮುಂದೆಯೂ ಜನರೊಂದಿಗೆ ಮುಂದೆ ಸಾಗಲಾಗುವುದು. ಯಾವುದೇ ಕಾರಣಕ್ಕೂ ಯಾರೂ ಆಸೆ-ಆಮಿಷಗಳಿಗೆ ಒಳಗಾಗಬಾರದು. ನಾನು ಯಾವುದೇ ಪಕ್ಷದ ಪರವಾಗಿ ನಿಲ್ಲುವ ವ್ಯಕ್ತಿ ಅಲ್ಲ. ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪಕ್ಷಾತೀತವಾಗಿ ಎಲ್ಲ ಸೇವೆ ಮಾಡುತ್ತೇನೆ. ಅಮೂಲ್ಯವಾದ ಮತ ನೀಡಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ ಬಾಲಕೃಷ್ಣ ಪಾಟೀಲ, ಉಪಾಧ್ಯಕ್ಷೆ ಲಕ್ಷ್ಮೀ ಮಾಸೇಕರ, ಪರುಶರಾಮ ಪರೀಟ, ರಾಕೇಶ ಪರೀಟ, ವಿಲಾಸ ಬೆಡ್ರೆ, ಪ್ರಮೋದ ಪಾಟೀಲ, ದಯಾನಂದ ಉಗಾಡೆ, ರಮೇಶ ಮೆಣಸೆ, ಜ್ಯೋತಿಬಾ ಚೌಗುಲೆ, ಶಶಿಕಾಂತ ಧುಳಜೆ, ರಾಜು ಡೋಣೆನ್ನವರ, ಅರವಿಂದ ಪಾಟೀಲ, ಸುವರ್ಣಾ ಬಿಜಗರಕರ, ರೂಪಾ ಪುಣೆನ್ನವರ, ಪಾರ್ವತಿ ರಜಪೂತ, ಸೋನಾಲಿ ಯಳ್ಳೂರಕರ, ಶಾಲೀನಿ ಪಾಟೀಲ, ವನಿತಾ ಪರೀಟ ಸೇರಿದಂತೆ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು./////