Belagavi News In Kannada | News Belgaum

4 ದಿನದಲ್ಲಿ 6 ಲಕ್ಷ ರೂ. ದಂಡದ ಹಣ ಸಂಗ್ರಹ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಕರೋನಾ ರೂಪಾಂತರಿ ಒಮಿಕ್ರಾನ್ ಬಗ್ಗೆ ಭೀತಿ ಹೆಚ್ಚಾಗುತ್ತಿದೆ. ಈ ನಡುವೆ ಜನರು ಮಾತ್ರ ಯಾವುದೇ ಭಯವಿಲ್ಲದಂತೆ ವರ್ತಿಸುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿದ್ದಾರೆ. ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ಜನರು ಡೋಂಟ್ ಕೇರ್ ಅನ್ನುತ್ತಿದ್ದಾರೆ. ಆದರೆ ಬಿಬಿಎಂಪಿ ಮಾರ್ಷಲ್ಗಳು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ಮೆರೆಯುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸಿದ ಬಿಬಿಎಂಪಿ, 4 ದಿನದಲ್ಲಿ ಲಕ್ಷ ಲಕ್ಷ ರೂ. ಹಣ ಸಂಗ್ರಹಿಸಿದೆ. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಕರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮಾಸ್ಕ್ ಕಡ್ಡಾಯ ಮಾಡಿದೆ. ಇನ್ನು ಬಿಬಿಎಂಪಿ ಮಾಸ್ಕ್ ಧರಿಸದವರಿಗೆ ತಕ್ಕ ಪಾಠ ಕಲಿಸಿ, 250 ರೂ. ದಂಡ ಹಾಕುತ್ತಿದೆ. 4 ದಿನದಲ್ಲಿ ಸುಮಾರು 6 ಲಕ್ಷ 31 ಸಾವಿರದ 500 ರೂಪಾಯಿ ಹಣ ಸಂಗ್ರಹಿಸಿದೆ. ಅಂತರ ಪಾಲಿಸದವರಿಂದ 1,17,750 ರೂ. ಹಣ ದಂಡ ವಸೂಲಿ ಮಾಡಿದ್ದಾರೆ. ಒಟ್ಟು 7,49,250 ರೂಪಾಯಿ ವಸೂಲಿ ಮಾಡಿದೆ. ಈವರೆಗೆ ಬಿಬಿಎಂಪಿ ಅಧಿಕಾರಿಗಳು ಒಟ್ಟು 14,82,75,211 ರೂ. ವಸೂಲಿ ಮಾಡಿದ್ದಾರೆ.
ಇಂದು ಕೂಡಾ ಬೆಂಗಳೂರಿನ ಮಾರುಕಟ್ಟೆಗಳಿಗೆ ಮಾಸ್ಕ್ ಹಾಕದೆ ಬರುವ ಜನರಿಗೆ ಬಿಬಿಎಂಪಿ ದಂಡ ವಿಧಿಸುತ್ತಿದೆ. ಬಿಬಿಎಂಪಿ ಮಾರ್ಷಲ್​ಗಳು ಮಾಸ್ಕ್​ ಧರಿಸದವರಿಗೆ 250 ರೂ. ದಂಡ ಹಾಕುತ್ತಿದ್ದಾರೆ.////