Belagavi News In Kannada | News Belgaum

ವಿಧಾನ ಪರಿಷತ್ ಚುನಾವಣೆ ಸಿದ್ಧತೆಗೆ ಕ್ಷಣಗಣನೆ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲೆ ಚುನಾವಣಾ ಆಯೋಗ ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಇದರಿಂದ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ರಂಗೇರುವಂತೆ ಮಾಡಿದ್ದು, ಅಥಣಿಯಲ್ಲಿ ಮಾಜಿ ಡಿಸಿಎಂ ಲಕ್ಷಣ ಸವದಿ ನೇತೃತ್ವದಲ್ಲಿ ಬಿಜೆಪಿ ಸಭೆ ನಡೆಸಿದ್ದು, ಚುನಾವಣೆಗೆ ಸಿದ್ಧತೆ ಆರಂಭಿಸಿದೆ.

ಸೋಮವಾರ ಅಥಣಿ ಪಟ್ಟಣದ ಹೊರವಲಯದ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಅಥಣಿ ಪುರಸಭೆಯ 27 ವಾರ್ಡಗಳ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಪೂರ್ವ ಬಾವಿ ಸಭೆ ನಡೆಸಲಾಯಿತು.

ಮಾಜಿ ಡಿಸಿಎಂ ಲಕ್ಷಣ ಸವದಿ ಅವರು ಮಾತನಾಡಿ ಪಕ್ಷದ ಪರವಾಗಿ ಹಗಲಿರುಳು ದುಡಿದವರು, ವಾರ್ಡ ನ್ ಸಮಸ್ಯೆಗಳ ಅರಿತ ಆಕಾಂಕ್ಷಿಗಳಿಗೆ ಮೊದಲ ಆದ್ಯತೆ ನೀಡಿ ಟಿಕೆಟ್ ನೀಡಿ ಎಂದು ಟಿಕೆಟ್ ಆಯ್ಕೆ ಸಮಿತಿಗೆ ಹೇಳಿದ್ದೇನೆ.

ಎಲ್ಲ ಸಮುದಾಯಗಳಿಗೂ ಅವಕಾಶ ನೀಡಲಾಗುವುದು.ಕೆಲ ವರ್ಷಗಳ ಹಿಂದೆ ಪೆಟ್ರೋಲ್ ಪಂಪ್ ನವರು ಹದಿನೈದು ಕೋಟಿ ರೂಪಾಯಿ ಪುರಸಭೆ ಅಭಿವೃದ್ಧಿಗೆ ಹಣ ಕೊಡಲು ಸಿದ್ದರಿದ್ದರು.

ನಂತರ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ ಅಥಣಿ ಪುರಸಭೆ ಚುನಾವಣೆಗೆ ಸ್ಪರ್ಧಿಸಲು ಬಳಸುವ ಎಲ್ಲಾ ಆಕಾಂಕ್ಷಿಗಳು ಯಾರಿಗೆ ಟಿಕೆಟ್ ಸಿಕ್ಕರು ಎಲ್ಲರೂ ಸಹಕಾರದಿಂದ ಒಗ್ಗಾಟಾಗಿ ಚುನಾವಣೆ ಎದುರಿಸೋಣ.

ಈ ವೇಳೆ ಶಿವಕುಮಾರ ಸವದಿ, ಆನೀಲರಾವ ದೇಶಪಾಂಡೆ, ಚಿದಾನಂದ ಸವದಿ, ಆನಂದ, ಡಾ.ಮಲ್ಲಿಕಾರ್ಜುನ, ನಿಂಗಪ್ಪ, ಸಿದ್ದಪ್ಪ,ಅಣ್ಣಾ ಸಾಹೇಬ್, ರಾಮನಗೌಡ, ಸುಶೀಲ್ ಕುಮಾರ್ ದೀಲಿಪ್ ದತ್ತ ಸೇರಿದಂತೆ ಇತರರು ಉಪಸ್ಥಿತರಿದ್ದರು./////