Belagavi News In Kannada | News Belgaum

ಎರಡೂವರೆ ವರ್ಷದ ಮಗುವಿನ ಮೇಲೆ ದುಷ್ಕೃತ್ಯ: ಆರೋಪಿಗೆ ದೋಷಿ ಎಂದು ತೀರ್ಪು ನೀಡಿದ ಕೋರ್ಟ್

ಸೂರತ್: ಎರಡೂವರೆ ವರ್ಷದ ಕಂದಮ್ಮನ ಮೇಲೆ ಕಾಮುಕ ದುಷ್ಕೃತ್ಯ ಎಸಗಿ, ಭರ್ಜರವಾಗಿ ಕೊಲೆಗೈದಿದ್ದ, ಆರೋಪಿಗೆ ಕೋರ್ಟ್ ತಿಂಗಳೊಗಾಗಿ ದೋಷಿ ಎಂದು ತೀರ್ಪು ನೀಡಿದ್ದು, ಇಂದು ಶಿಕ್ಷೆಯ ಪ್ರಮಾಣ ಘೋಷಿಸಲಿದೆ ಎಂದು ವರದಿ ತಿಳಿಸಿದೆ.

ವಲಸೆ ಕಾರ್ಮಿಕ (35) ಬಂಧಿತ ಆರೋಪಿ,  ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗೆ ಗುಜರಾತ್ ಕೋರ್ಟ್ ಪೋಕ್ಸೋ ಕಾಯ್ದೆಯಡಿ ಕೆಸ್ ದಾಖಲಿಸಿಕೊಂಡು ಕಾಮುಕನಿಗೆ ಕಠಿಣ ನೀಡುವ ಕುರಿತು ಮಾಹಿತಿ ಇದೆ.

ಬಿಹಾರ ಮೂಲದ ಗುಡ್ಡು ಯಾದವ್ ಗುಜರಾತ್ ನ ಸೂರತ್ ನಗರದ ಪಂಡೇಸರಾ ಪ್ರದೇಶದಲ್ಲಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ವಾಸವಾಗಿದ್ದ. ಆರೋಪಿ ಯಾದವ್ ಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ನಯನ್ ಸುಖಾಂಡವಾಲಾ ವಾದ ಮಂಡಿಸುವ ವೇಳೆ ಬೇಡಿಕೆ ಇಟ್ಟಿರುವುದಾಗಿ ವರದಿ ತಿಳಿಸಿದೆ.

ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ತನ್ನ ಕಕ್ಷಿದಾರನಿಗೆ ಮರಣದಂಡನೆ ಶಿಕ್ಷೆ ವಿಧಿಸಬಾರದು ಎಂದು ಯಾದವ್ ಪರ ವಕೀಲ ವಾದ ಮಂಡಿಸಿರುವುದಾಗಿ ವರದಿ ಹೇಳಿದೆ./////