Belagavi News In Kannada | News Belgaum

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಶೀಘ್ರದಲ್ಲೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ : ಅಶೋಕ ಪೂಜಾರಿ ಹೇಳಿಕೆ.

ಗೋಕಾಕ: “ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ  ನೇತೃತ್ವದಲ್ಲಿ ಶೀಘ್ರದಲ್ಲೆ  ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದೆವೆ” ಎಂದು  ಕಾಂಗ್ರೆಸ್ ಮುಖಂಡ ಅಶೋಕ  ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಾದ್ಯಮದವರೊಂದಿಗೆ ಮಾತನಾಡಿದ  ಅವರು,  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಬಗ್ಗೆ ಇಲ್ಲಿವರೆಗೂ ಅನೇಕ ಶಂಕೆಗಳ ಗೊಂದಲಗಳಿದ್ದವು, ಹೀಗಾಗಿ ತಡವಾಗಿದೆ. ವಿಧಾನ ಪರಿಷತ್ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರು  ಹಾಗೂ ಮಾಜಿ  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು  ರಾಯಬಾಗ, ರಾಮದುರ್ಗ ಪ್ರಚಾರದಲ್ಲಿ ಭೇಟಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ , ಮಾಜಿ ಶಾಸಕ ಅಶೋಕ ಪಟ್ಟಣ ಜತೆಯಲ್ಲಿ ಪಕ್ಷದ ಕುರಿತು  ಅನೇಕ ಚರ್ಚೆ ನಡೆಸಲಾಯಿತು.  ಇದಾದ ಬಳಿಕ ಡಿಕೆಶಿವಕುಮಾರ್ ಅವರು ಅಶೋಕ ಪೂಜಾರಿ ಕಾಂಗ್ರೆಸ್ ಸೇರ್ಪಡೆ ಸುಳಿವು ನೀಡಿದ್ದಾರೆ. ಈಗಾಗಲೇ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಇದೇ ತಿಂಗಳು ಬೆಳಗಾವಿ ಅಧಿವೇಶನ ನಡೆಯಲಿದೆ.  ಕಾಂಗ್ರೆಸ್ ಹಿರಿಯ ಮುಖಂಡರು ಸಮ್ಮುಖದಲ್ಲಿ ನಮ್ಮೆಲ್ಲ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರು ಒಪ್ಪಿಗೆ ಸೂಚಿಸದ ಮೇಲೆ ಅಧಿಕೃತವಾಗಿ ಡಿ.15 ಹಾಗೂ 16 ರಂದು ಕೈ ಹಿಡಿಯಲಿದ್ದೆನೆ ಎಂದರು./////