Belagavi News In Kannada | News Belgaum

ಬೆಳಗಾವಿ ಖ್ಯಾತ ದೇಹದಾರ್ಢ್ಯ ಪಟು ಸಾವು

ಬೆಳಗಾವಿ: ಸ್ನೇಹಿತರ ಜತೆ ಸಂಬಂಧಿಕರ  ಮದುವೆಯ ಸಮಾರಂಭರಕ್ಕೆ  ದ್ವಿಚಕ್ರ ವಾಹನದಲ್ಲಿ ಗೋವಾಕ್ಕೆ ತೆರಳುತ್ತಿದ್ದ ಬೆಳಗಾವಿ ಖ್ಯಾತ ದೇಹದಾರ್ಢ್ಯ ಪಟು, ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಗೋವಾ ರಸ್ತೆಯ ಚೋರ್ಲಾ ಘಾಟ್‌ನಲ್ಲಿ  ಅಪಘಾತ ಸಂಭವಿಸಿದೆ.

ನಗರದ ವಡಗಾಂವ ವಾಜೆ ಗಲ್ಲಿ ನಿವಾಸಿ ಮುರಳಿ ಅಶೋಕ್ ಭಿಲಾರೆ (27) ಮೃತ ವ್ಯಕ್ತಿ.  ಜಾಂಬೋಟಿಯ  ರಸ್ತೆ ಮಾರ್ಗವಾಗಿ   ಸಂಚರಿಸುತ್ತಿರುವ ವೇಳೆಯಲ್ಲಿ ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ಕೈ ತಪ್ಪಿ ಬೈಕ್ ಕಂದಕಕ್ಕೆ ಉರಳಿದ್ದು, ಅಶೋಕ್ ನ ತಲೆಗೆ ಗಂಭೀರ ಗಾಯಗೊಂಡಿದ್ದರಿಂದ  ಸ್ಥಳದಲ್ಲೇ  ಮೃತಪಟ್ಟಿದ್ದಾರೆ.

ಜತೆಗಿದ್ದ ವ್ಯಕ್ತಿ ಒಂದು ರಾತ್ರಿ ಅರಣ್ಯದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಮರುದಿನ  ರಸ್ತೆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.  ಅಶೋಕ 2018 ರಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ‘ಐಎಂಇಆರ್’ ಪ್ರಶಸ್ತಿ ಗೆದ್ದಿದ್ದರು. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವು ಚಿನ್ನದ ಪದಕಗಳಿಗೆ ಭಾಗಿನರಾಗಿದ್ದರು.

ಚಿನ್ನದ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗ್ಗಿಲು ಮುಟ್ಟಿದೆ.  ಕುಂದಾನಗರಿಯ ಹಲವರು ಅಗಲಿದ ಸಾಧನಕನಿಗೆ ಗೌರವ ನಮಗ ಸೂಚಿಸಿ, ಸಂತಾಪ ಸೂಚಿಸಿದ್ದಾರೆ./////