Belagavi News In Kannada | News Belgaum

ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ಸಕಲ ರೀತಿಯಲ್ಲಿ ಸಿದ್ದತೆ :ತಾಲ್ಲೂಕಾ ದಂಡಾಧಿಕಾರಿ ಆರ್ ಆರ್ ಬುರ್ಲಿ

ಶೇಡಬಾಳ : ರಾಜ್ಯ ಚುನಾವಣೆ ಆಯೋಗದ ಆದೇಶದ ಮೇರೆಗೆ ಕಾಗವಾಡ ತಾಲ್ಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ಸಕಲ ರೀತಿಯಲ್ಲಿ ಸಿದ್ದತೆ ಕೈಗೊಂಡಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆಯೂ ಪ್ರಾರಂಭವಾಗಿದೆ ಎಂದು ತಾಲ್ಲೂಕಾ ದಂಡಾಧಿಕಾರಿ ಆರ್ ಆರ್ ಬುರ್ಲಿ ಹೇಳಿದರು.

ಅವರು ಬುಧವಾರ ದಿ. 8 ರಂದು ಕಾಗವಾಡದ ತಹಶೀಲ್ದಾರ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಗವಾಡ ತಾಲೂಕಿನ ಐನಾಪೂರ ಹಾಗೂ ಶೇಡಬಾಳ ಪಟ್ಟಣ ಪಂಚಾಯತಿ ಮತ್ತು ಉಗಾರ ಖುರ್ದ ಪುರಸಭೆಗೆ ಚುನಾವಣೆ ಜರುಗುತ್ತಿದ್ದು, ದಿನಾಂಕ 8/12/2021 ರಂದು ನಾಮಪತ್ರ ಸ್ವೀಕಾರ ಪ್ರಾರಂಭವಾಗಿದೆ.

ಈಗಾಗಲೇ ಚುನಾವಣೆಗಾಗಿ ಆರ್ ಒ ಗಳನ್ನು ನೇಮಿಸಿಲಾಗಿದ್ದು, 15/12/2021 ರವರೆಗೆ ನಾಮಪತ್ರ ಸ್ವೀಕಾರ ನಡೆಯಲಿದ್ದು 16/12/2021 ರಂದು ನಾಮಪತ್ರ ಪರಿಶೀಲನೆ ನಡೆಸಲಿದ್ದು 18/12/2021 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಎಲ್ಲಿ ಚುನಾವಣೆ ಅವಶ್ಯವಿದೆ ಅಲ್ಲಿ ಚುನಾವಣೆ ನಡೆಸಲು ಪೂರ್ವ ತಯಾರಿ ನಡೆಸಲಾಗಿದೆ 27/12/2021 ರಂದು ಮತದಾನ ಜರುಗಲಿದೆ. 30/12/2021 ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಮತ ಏಣಿಕೆ ಪ್ರಕ್ರಿಯೆ ಕಾರ್ಯ ಜರುಗಲಿದೆ ಎಂದರು.

ಇನ್ನು ತಾಲೂಕಿನ ಮೂರು ಗ್ರಾಮ ಪಂಚಾಯತಿಗಳಿಗೆ ಐದು ಸ್ಥಾನಕ್ಕಾಗಿ ಉಪಚುನಾವಣೆ ನಡೆಯಲಿದ್ದು, ಶಿರಗುಪ್ಪಿ ಗ್ರಾಮ ಪಂಚಾಯತಿಯ 2 ಸ್ಥಾನಕ್ಕೆ ಹಾಗೂ ಮಂಗಸೂಳಿ ಗ್ರಾಮ ಪಂಚಾಯತಿಯ 2 ಸ್ಥಾನಕ್ಕೆ ಮತ್ತು ಕೆಂಪವಾಡ ಗ್ರಾಮ ಪಂಚಾಯತಿಯ ಒಂದು ಸ್ಥಾನಕ್ಕೆ ಇದೇ ತಿಂಗಳ 13/12/2021 ರಿಂದ ನಾಮಪತ್ರ ಸ್ವೀಕಾರಕ್ಕೆ ಪ್ರಾರಂಭವಾಗಿ ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ಆರ್ ಒ ಮತ್ತು ಎ ಆರ್ ಒ ಗಳನ್ನು ನೇಮಕ ಮಾಡಲಾಗಿದ್ದು ಅವರು 17/12/2021 ರ ವರೆಗೆ ನಾಮಪತ್ರ ಸ್ವೀಕರಿಸಲಿದ್ದಾರೆ 18/12/2021 ರಂದು ನಾಮಪತ್ರ ಪರಿಶೀಲನೆ ಮತ್ತು 20/12/2021 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ ಅವಶ್ಯಕತೆ ಇದ್ದಲ್ಲಿ 27/12/2021 ರಂದು ಚುನಾವಣೆ ನಡೆಸಲಾಗುವದು 30/12/2021 ರಂದು ಚುನಾವಣಾ ಮತದಾನ ಏಣಿಕೆ ಕಾರ್ಯ ಅದು ಕೂಡ ಶಿವಾನಂದ ಮಹಾವಿದ್ಯಾಲಯದಲ್ಲಿ ಜರುಗಲಿದೆ. ಈ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗಳಿಗೆ ಈಗಾಗಲೇ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ ಹೇಳಿದರು.

ಈ ವೇಳೆ ಉಪತಹಶಿಲ್ದಾರ ಅಣ್ಣಾಸಾಬ ಕೋರೆ ಉಪಸ್ಥಿತರಿದ್ದರು
ಒಟ್ಟಾರೆಯಾಗಿ ಪಟ್ಟಣ ಪಂಚಾಯತಿ, ಪುರಸಭೆ, ಗ್ರಾಮ ಪಂಚಾಯತಿ ಚುನಾವಣೆಗೆ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.