Belagavi News In Kannada | News Belgaum

ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣ ವಾಯುಸೇನೆ ಅಧಿಕೃತ ಹೇಳಿಕೆ

ಚೆನ್ನೈ: ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಬಿಪಿನ್ ರಾವತ್ ಅವರು ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.

ಈ ಸಂಬಂಧ ವಾಯುಸೇನೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿ ಮೃತಪಟ್ಟ ವಿಚಾರವನ್ನು ತಿಳಿಸಿದೆ. ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಕೊಯಮತ್ತೂರು, ಕೂನೂರು ನಡುವಿನ ನೀಲಗಿರಿ ಅರಣ್ಯ ವ್ಯಾಪ್ತಿಯಲ್ಲಿ ದೊಡ್ಡ ಸ್ಫೋಟದ ಶಬ್ಧದೊಂದಿಗೆ ಹೆಲಿಕಾಪ್ಟರ್ ಪತನವಾಗಿದೆ. ದುರಂತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್ ಸೇರಿ 14 ಮಂದಿ ಪಯಣಿಸುತ್ತಿದ್ದರು. ಈ ದುರಂತದಲ್ಲಿ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ 11 ಮಂದಿ ಬಲಿ ಆಗಿದ್ದಾರೆ.

ಬಿಪಿನ್ ರಾವತ್ ಯಾರು?: ಬಿಪಿನ್ ರಾವತ್ ಉತ್ತರಾಖಂಡನ್‍ನ ಪೌರಿಯಲ್ಲಿ 1958ರಲ್ಲಿ ಜನಿಸಿದ್ದರು. ತಂದೆ ಲಕ್ಷ್ಮಣ್ ಸಿಂಗ್, ನಿವೃತ್ತ ಲೆಫ್ಟಿನೆಂಟ್ ಜನೆರಲ್ ಆಗಿ ಸೇವೆಸಲ್ಲಿಸಿದ್ದಾರೆ.

 

ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (2020ರ ಜನವರಿ1 ) ಭಾರತೀಯ ಸೇನೆಯ ಟಾಪ್ ಮೋಸ್ಟ್, 4 ಸ್ಟಾರ್ ಸೈನ್ಯಾಧಿಕಾರಿ, ಲಡಾಖ್ ಬಿಕ್ಕಟ್ಟಿನ ವೇಳೆ ಚೀನಾ ವಿರುದ್ಧ ವ್ಯೂಹ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ರಕ್ಷಣಾ ರಂಗದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದವರು. ತ್ರಿವಿಧ ದಳಗಳ 17 ಕಮಾಂಡ್‍ಗಳನ್ನು ಸೇರಿಸುವ ಗುರುತರ ಹೊಣೆ ಹೊತ್ತಿದ್ದರು.