Belagavi News In Kannada | News Belgaum

ಯಾದವಾಡ : ಮೃತ ಯೋಧನ ಕುಟುಂಬಕ್ಕೆ ಸತೀಶ್ ಜಾರಕಿಹೊಳಿ ಸಾಂತ್ವನ

ಮೂಡಲಗಿ : ಅನಾರೋಗ್ಯದಿಂದ ನಿಧನರಾದ ತಾಲ್ಲೂಕಿನ ಯಾದವಾಡ ಗ್ರಾಮದ ಸಿಆರ್ ಪಿ ಎಫ್ ಯೋಧ ಚಂದ್ರಶೇಖರ್ ಈಶ್ವರ ದಲಾಲ (32) ಅವರ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

 

2009ರಲ್ಲಿ ಸೇನೆಗೆ ಸೇರಿದ್ದ ಚಂದ್ರಶೇಖರ, ಹೈದರಾಬಾದ್ ರಾಷ್ಟ್ರೀಯ ಭದ್ರತಾ ದಳದಲ್ಲಿ ಕಮಾಂಡರ್ ಆಗಿದ್ದರು. ಅನಾರೋಗ್ಯದಿಂದ ಒಂದೂವರೆ ತಿಂಗಳ ಹಿಂದೆ ಹುಟ್ಟೂರಿಗೆ ಆಗಮಿಸಿದ್ದರು. ಚಿಕಿತ್ಸೆ ಫಲಿಸದೆ ಸೋಮವಾರ ರಾತ್ರಿ ನಿಧನರಾಗಿದ್ದರು.

 

ಮಂಗಳವಾರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತ್ತು. ಇಂದು  ಸತೀಶ್ ಜಾರಕಿಹೊಳಿ  ಭೇಟಿ ನೀಡಿ , ಯೋಧನ ಪೋಷಕರು, ಪತ್ನಿಗೆ ಧೈರ್ಯ ತುಂಬಿದ್ದಾರೆ. ರಾಜ್ಯ ಸರ್ಕಾರದಿಂದ ಅಗತ್ಯ ನೆರವು ಕೊಡಿಸುವ ಭರವಸೆ ನೀಡಿದರು.