Belagavi News In Kannada | News Belgaum

ಸಾಕ್ರಾ ವಲ್ರ್ಡ್ ಹಾಸ್ಪಿಟಲ್‍ನಿಂದ ಹುಬ್ಬಳ್ಳಿಯ ಮಾನ್ವಿ ಹಾಸ್ಪಿಟಲ್‍ನಲ್ಲಿ ಶೌಲ್ಡರ್ ಕ್ಲಿನಿಕ್

ಹುಬ್ಬಳ್ಳಿ, 8 ಡಿಸೆಂಬರ್ 2021: ಭಾರತದಲ್ಲಿ ನವೀನ ಮಾದರಿಯ ಆರೋಗ್ಯ ಆರೈಕೆ ಕ್ಷೇತ್ರದಲ್ಲಿ ಜಪಾನೀಸ್ ಕಟ್ಟಿಂಗ್ ಎಡ್ಜ್ ತಂತ್ರಜ್ಞಾನವನ್ನು ನೀಡುತ್ತಿರುವ ಬೆಂಗಳೂರಿನ ಪ್ರಮುಖ ಆರೋಗ್ಯ ಆರೈಕೆ ಸಂಸ್ಥೆಯಾಗಿರುವ ಸಾಕ್ರ ವಲ್ರ್ಡ್ ಹಾಸ್ಪಿಟಲ್ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಭುಜದ ಕ್ಲಿನಿಕ್ ಅನ್ನು ಆರಂಭಿಸಿದೆ. ಹುಬ್ಬಳ್ಳಿಯ ಮಾನ್ವಿ ಹಾಸ್ಪಿಟಲ್ ಸಹಭಾಗಿತ್ವದಲ್ಲಿ ಈ ಭುಜದ ಕ್ಲಿನಿಕ್ ಅನ್ನು ಆರಂಭಿಸಿದೆ.

 

ಇದು ಸಂಪೂರ್ಣವಾಗಿ ಭುಜದ ಅಸ್ವಸ್ಥತೆಗಳು ಮತ್ತು ಇತರೆ ಸಮಸ್ಯೆಗಳಿಗೆ ಮೀಸಲಿರುವ ಕ್ಲಿನಿಕ್ ಆಗಿದೆ ಮತ್ತು ಸಾಕ್ರ ವಲ್ರ್ಡ್ ಹಾಸ್ಪಿಟಲ್‍ನ ಆರ್ಥೋಪೆಡಿಕ್ಸ್‍ನ ಸೀನಿಯರ್ ಕನ್ಸಲ್ಟೆಂಟ್ ಡಾ.ಬ್ಯಾನರ್ಜಿ ಬಿ.ಎಚ್. ಅವರ ನೇತೃತ್ವದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಡಾ.ಬ್ಯಾನರ್ಜಿಯವರು ಭುಜ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದರಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಅನುಭವವನ್ನು ಹೊಂದಿದ್ದಾರೆ. ಇದುವರೆಗೆ 5000 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ಮತ್ತು 20,000 ಕ್ಕೂ ಅಧಿಕ ಹೊರರೋಗಿಗಳಿಗೆ ಚಿಕಿತ್ಸೆ ನೀಡಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಈ ಶೌಲ್ಡರ್ ಕ್ಲಿನಿಕ್ ಬಗ್ಗೆ ಮಾತನಾಡಿದ ಡಾ.ಬ್ಯಾನರ್ಜಿ ಬಿ.ಎಚ್. ಅವರು, “ಹುಬ್ಬಳ್ಳಿಯ ಮಾನ್ವಿ ಹಾಸ್ಪಿಟಲ್‍ನಲ್ಲಿ ನಮ್ಮ ಮೊಟ್ಟ ಮೊದಲ ಶೌಲ್ಡರ್ ಕ್ಲಿನಿಕ್ ಅನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಇದು ಸಂಪೂರ್ಣವಾಗಿ ಭುಜ ಮತ್ತು ಭುಜಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮೀಸಲಾಗಿರುವ ಕ್ಲಿನಿಕ್ ಆಗಿದೆ.

ಭವಿಷ್ಯಕ್ಕಾಗಿ ಸುರಕ್ಷಿತವಾಗಿ ಸ್ನಾಯುಗಳು, ಅಂಗಾಂಶಗಳು ಮತ್ತು ಭುಜದ ಕೀಲುಗಳನ್ನು ಇರಿಸಿಕೊಳ್ಳಲು ಸರಿಯಾದ ಸಂಭವನೀಯ ರೀತಿಯಲ್ಲಿ ಕಾಯಿಲೆಗೆ ಚಿಕಿತ್ಸೆ ನೀಡಲು ಇದು ಅತ್ಯಂತ ಮಹತ್ವದ್ದಾಗಿದೆ.

ಅಂತಹ ಯಾವುದೇ ಭುಜಕ್ಕೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು, ಸರಳ ಅಥವಾ ಸಂಕೀರ್ಣ, ಶಸ್ತ್ರಚಿಕಿತ್ಸಾ, ನಾನ್ ಸರ್ಜಿಕಲ್, ಫಿಯಿಯೋಥೆರಪಿ ಚಿಕಿತ್ಸೆಯನ್ನು ಒಳಗೊಂಡಿರುವ ಎಲ್ಲಾ ವಿಭಿನ್ನವಾದ ವಿಧಾನಗಳಿಗೆ ತಜ್ಞರ ಸಲಹೆಯನ್ನು ಪಡೆಯಬೇಕು. ನಮ್ಮ ಶೌಲ್ಡರ್ ಕ್ಲಿನಿಕ್ ಅಂತಹ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ’’ ಎಂದರು.

ಹುಬ್ಬಳ್ಳಿಯಲ್ಲಿ ಕ್ಲಿನಿಕ್ ಒಪಿಡಿಯಾಗಿ ಕಾರ್ಯನಿರ್ವಹಣೆ ಮಾಡಲಿದೆ ಮತ್ತು ಎಲ್ಲಾ ಪ್ರಮುಖ ಸರ್ಜರಿಗಳು, ಆಥೋಸ್ಕೋಪಿಕ್ ಸರ್ಜರಿಗಳು, ಕೀಲು ಜೋಡಣೆ ಸರ್ಜರಿಗಳು, ಟ್ರಾಮಾ ಸರ್ಜರಿಗಳು ಮತ್ತು ಇತರೆ ಸಣ್ಣ ಪ್ರಮಾಣದ ಸರ್ಜರಿಗಳನ್ನು ಬೆಂಗಳೂರಿನ ಸಾಕ್ರ ವಲ್ರ್ಡ್ ಹಾಸ್ಪಿಟಲ್‍ನಲ್ಲಿ ನೆರವೇರಿಸಲಾಗುತ್ತದೆ.