Belagavi News In Kannada | News Belgaum

ಬೆಳಗಾವಿಯಲ್ಲಿ ಡಾ ಶಿವಬಸವ ಮಹಾಸ್ವಾಮಿಜಿಯವರ ಪುತ್ಥಳಿ ಅನಾವರಣ

 

ಬೆಳಗಾವಿ ; ಬೆಳಗಾವಿಯ ಶಿವಬಸವ ನಗರದಲ್ಲಿ ಇಂದು ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಜಿಯವರ ಪುತ್ಥಳಿಯನ್ನು ಸಿರಿಗೆರೆಯ ಶ್ರೀ ಜಗದ್ಗುರು ತರಳುಬಾಳು ಮಹಾಸಂಸ್ಥಾನ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅನಾವರಣಗೆuಟಿಜeಜಿiಟಿeಜಳಿಸಿದರು .
ಶಿವಬಸವ ನಗರದ ಚೌಕದಲ್ಲಿ 7 ಅಡಿ ಎತ್ತರದ ಭವ್ಯ ಸುಂದರ ಲಿಂಗೈಕ್ಯ ಶ್ರೀಗಳ ಮೂರ್ತಿ ಅನಾವರಣಗೆuಟಿಜeಜಿiಟಿeಜಳಿಸಿ ಲ್ಪಟ್ಟಿತು .ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ,ಬೆಳಗಾವಿಯ ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ,ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ,ಹಂದಿಗುಂದದ ಶ್ರೀ ಸಿದ್ದಲಿಂಗ ಸ್ವಾಮೀಜಿ ,ಕಿತ್ತೂರಿನ ಕಲ್ಮಠದ ಸ್ವಾಮೀಜಿ ಕಡೋಲಿಯ ಸ್ವಾಮೀಜಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು .

ನಂತರ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಗದುಗಿನ ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಗಳ ಕೊಡುಗೆ ಬೆಳಗಾವಿ ಮತ್ತು ಈ ಪರಿಸರಕ್ಕೆ ಗಡಿ ಭಾಗದಲ್ಲಿ ಅಪಾರವಾಗಿದೆ ,ಬೆಳಗಾವಿಯಲ್ಲಿ ಕನ್ನಡ ಉಳಿಕೆ ಮತ್ತು ಬೆಳೆಸುವಲ್ಲಿ ಅವರು ಅಪಾರವಾದ ಶ್ರಮ ವಹಿಸಿದ್ದಾರೆ .

 

ಕೆಎಲ್ ಇ ಸಂಸ್ಥೆಯ ಶಿಕ್ಷಣ ಸಂಸ್ಥೆ ಪ್ರಾರಂಭವಾದಾಗ ಅಲ್ಲಿ ಕಲಿಯುವ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯಗಳನ್ನು ಪ್ರಾರಂಭಿಸುವ ಮೂಲಕ ನಾಡಿನ ವಿವಿಧ ಭಾಗಗಳಿಂದ ಅಸಂಖ್ಯಾತ ಕನ್ನಡಿಗ ವಿದ್ಯಾರ್ಥಿಗಳು ಬರುಬರುತ್ತಾ ಈ ಭಾಗವೆಲ್ಲ ಕನ್ನಡಮಯವಾಗಿ ಬದಲಾಗಿತ್ತು ಎಂದು ಅವರು ಹೇಳಿದರು .
ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಲಿಂಗಾಯಿತ ಮಠ ಮಾನ್ಯಗಳು ಮತ್ತು ಲಿಂಗಾಯತ ಸಮಾಜದವರು ಪ್ರಾರಂಭಿಸಲಾದ ಶಿಕ್ಷ ಣ ಸಂಸ್ಥೆಗಳಿಂದಾಗಿ ಮತ್ತು ಉಚಿತ ಪ್ರಸಾದ ನಿಲಯ ಗಳಿಂದಾಗಿ ಈ ನಾಡಿನ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರವಾದ ಪ್ರಗತಿಗೆ ಕಾರಣವಾಯಿತು ಈ ಹಿನ್ನೆಲೆಯಲ್ಲಿ ಆ ಮಹನೀಯರನ್ನು ನೆನಪಿಸಿಕೆuಟಿಜeಜಿiಟಿeಜಳ್ಳುವುದು ಪ್ರಸ್ತುತವಾಗಿದೆ ಎಂದರು .

ಹಾನಗಲ್ಲ ಶಿವಕುಮಾರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮತ್ತು ಅವರ ಪ್ರಭಾವದಲ್ಲಿ ಬೆಳೆದಿರುವ ನಾಡಿನ ಬಹುತೇಕ ಲಿಂಗಾಯಿತ ಮಠ ಮಾನ್ಯಗಳಲ್ಲಿರುವ ಸ್ವಾಮೀಜಿಗಳು ಶಿಕ್ಷಣ ಸಂಸ್ಥೆಗಳನ್ನು ಮತ್ತು ಉಚಿತ ಪ್ರಸಾದ ನಿಲಯಗಳನ್ನು ಪ್ರಾರಂಭಿಸಿ ಬಡ ಮತ್ತು ಅಸಹಾಯಕ ಮಕ್ಕಳಿಗೆ ಶಿಕ್ಷಣ ಮತ್ತು ಅನ್ನದಾಸೋಹವನ್ನು ನೀಡಿದರು ಮೈಸೂರು ಭಾಗದಲ್ಲಿ ಸುತ್ತೂರು ಮಠದವರು ಮಾಡಿದ ಕಾರ್ಯವನ್ನು ಧಾರವಾಡದ ಭಾಗದಲ್ಲಿ ಮೃತ್ಯುಂಜಯ ಸ್ವಾಮಿಗಳು ಮತ್ತು ಬೆಳಗಾವಿ ಭಾಗದಲ್ಲಿ ಲಿಂಗೈಕ್ಯ ಡಾ ಶಿವಬಸವ ಸ್ವಾಮೀಜಿಯವರು ಪ್ರಾರಂಭಿಸಿ ದಾಸೋಹ ತತ್ತ್ವವನ್ನು ಜನರ ಮನೆ ಮತ್ತು ಮನ ಕ್ಕೆ ತಲುಪಿಸಿದರು ಅಂಥ ಶ್ರೀಗಳ ಭವ್ಯ ಮೂರ್ತಿ ಇಂದು ಅನಾವರಣಗೊಂಡಿದ್ದು ಅತ್ಯಂತ ಸಂತಸದ ವಿಷಯ ಎಂದರು .

ಇದೇ ಸಂದರ್ಭದಲ್ಲಿ ತರಳುಬಾಳು ಸಂಸ್ಥಾನ ಮಠದ ಶ್ರಿ? ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಆ ಭಾಗದಲ್ಲಿ ಹರಿಹರದಿಂದ ಐವತ್ತಾರು ಕಿಲೋಮೀಟರ್ ದೂರದಿಂದ ನೀರನ್ನು ತಂದು ಭರಮಸಾಗರದ 1200 ಎಕರೆ ವಿಸ್ತೀರ್ಣದ ಬೃಹತ್ ಕೆರೆ ತುಂಬಿಸುವ ಮತ್ತು ಸುತ್ತಮುತ್ತಲಿನ ನಲವತ್ತೆರಡು ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಸರ್ಕಾರದ ಮೇಲೆ ಪದೇ ಪದೇ ಒತ್ತಡ ಹೇರಿ ಮಾಡಿದರು ಮಾಡಿದರು ಇದು ಆ ಭಾಗದ ಜನತೆಯ ಬರಗಾಲ ನೀಗಿಸಿತು ಎಂದ ಅವರು ಶ್ರೀಗಳ ಸಮಾಜಮುಖಿ ಕಾರ್ಯ ನಮಗೆಲ್ಲ ಮಾರ್ಗದರ್ಶನವಾಗಿದೆ , ಹಿಂದೆಲ್ಲ ಸಮಾಜವನ್ನು ಒಗ್ಗೂಡಿಸುವ ಕಾರ್ಯವಾಗಿದೆ ಇಂದು ಮೀಸಲಾತಿಗಾಗಿ ಸಮಾಜವನ್ನ ಒಡೆಯುವ ಕಾರ್ಯ ನಡೆಯುತ್ತಿರುವುದು ದುರದೃಷ್ಟಕರ ಎಂದು ಅವರು ವಿಷಾದಿಸಿದರು .

ನಾಗನೂರ ರುದ್ರಾಕ್ಷಿಮಠದ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಜಿಯವರ ಪುತ್ಥಳಿ ಅನಾವರಣಗೊಳಿಸಿ ಆಶೀರ್ವಚನ ನೀಡಿದ ಶ್ರೀ ಸಿರಿಗೆರೆಯ ಜಗದ್ಗುರು ತರಳುಬಾಳು ಮಹಾಸಂಸ್ಥಾನಮಠದ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಬಹಳ ಹಿಂದೆ ತಾವು ವಿದೇಶಕ್ಕೆ ಹೋಗುವ ಮುನ್ನ ಮತ್ತು ಹಿಂತಿರುಗಿದ ನಂತರ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ಆಗಮಿಸಿ ಲಿಂಗೈಕ್ಯ ಡಾ ಶಿವಬಸವ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡಿದ್ದನ್ನು ಅವರು ನೆನಪಿಸಿಕೊಂಡರಲ್ಲದೆ ಇಂದು ತಾವೇ ಅವರ ಮೂರ್ತಿ ಅನಾವರಣ ಗೊಳಿಸುವ ಅಂಥ ಸಂದರ್ಭ ಬಂದಿದ್ದು ಹೃದಯ ತುಂಬಿ ಬರುತ್ತಿದೆ ಎಂದರು .

ಮಠ ಮಾನ್ಯಗಳಲ್ಲಿರುವ ಸ್ವಾಮೀಜಿಗಳಿಗಿಂತ ಭಕ್ತರೇ ತಂದೆತಾಯಿಗಳು ಎಂದ ಅವರು ಇಂದು ಕೌಟುಂಬಿಕ ಸಂಬಂಧಗಳು ಮಾಯವಾಗುತ್ತಿವೆ ಎಲ್ಲಾ ಕೌಟುಂಬಿಕ ಸಂಬಂಧಗಳು ಇಂದು ಲಾಭ ಮತ್ತು ನಷ್ಟದ ಮೇಲೆ ನಿಂತಿವೆ ಹಾಗಾಗಬಾರದು ಎಂದು ಅವರು ಹೇಳಿದರು .

ಶ್ರೀಮಠದಿಂದ ಕೊಡಮಾಡಲ್ಪಟ್ಟ ಸೇವಾರತ್ನ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಅವರು ಹಳೆಯ ಬೇರನ್ನು ಹಿಡಿದು ಹೊಸ ಚಿಗುರನ್ನು ಬೆಳೆಸಬೇಕು ಹಳಬರನ್ನು ಗೌರವಿಸಬೇಕು ಅವರ ಅನುಭವದ ಲಾಭವನ್ನು ಪಡೆದುಕೊಳ್ಳಿ ಎಂದರು .

ಸಮಾರಂಭದ ನೇತೃತ್ವ ವಹಿಸಿದ್ದ ಹಾಲಕೆರೆಯ ಅನ್ನದಾನೀಶ್ವರ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಅವರು ಮಾತನಾಡಿ ತಮ್ಮ ಮಠದ ಲಿಂಗೈಕ್ಯ ಹಿರಿಯ ಶ್ರಿ?ಗಳ ಮತ್ತು ರುದ್ರಾಕ್ಷಿಮಠದ ಲಿಂಗೈಕ್ಯ ಶ್ರೀಗಳ ಸಂಬಂಧವನ್ನು ನೆನಪಿಸಿ???ಂಡರು ಹಾಗೂ ಇತ್ತೀಚೆಗೆ ಲಿಂಗೈಕ್ಯರಾದ ಹಾಲಕೆರೆಯ ಹಿರಿಯ ಶ್ರಿ?ಗಳ ನೆನೆದು ಗದ್ಗದಿತರಾದರು .

ಮುಖ್ಯ ಅತಿಥಿಗಳಾಗಿದ್ದ ರಾಜ್ಯದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಗಿರೀಶ ಹೊಸೂರ ಸಾಂದರ್ಭಿಕವಾಗಿ ಮಾತನಾಡಿದರು . ವಿಜೇತರಾದ ಡಾ ಗುರುಲಿಂಗ ಕಾಪ್ಸೆ , ಶ್ರೀ ಎನ್ಕೆ ಕುಂಬಾರ್ , ಅಶೋಕ ಚಂದರಗಿ , ಡಾ ಸಿ ಆರ್ ಯರವಿನ ತೆಲಿಮಠ , ಶ್ರೀ ಚನ್ನಯ್ಯ ಹಿರೇಮಠ , ಶ್ರೀಮಠದಿಂದ ಕೊಡಲಾದ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು .

ಶ್ರಿ?ಗಳ ಮೂರ್ತಿ ನಿರ್ಮಿಸಿದ ಶ್ರಿ? ವಿಜಯ ಗುಜ್ಜರ್ , ಆರ್ ಎಂ ಹೆಗ್ಡೆ ಮಹೇಶ್ ಹೆಬ್ಬಾಳೆ ಇವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು .ರಾಜ್ಯೊ?ತ್ಸವ ಪ್ರಶಸ್ತಿ ವಿಜೇತ ಆದಿಚುಂಚನಗಿರಿ ಶ್ರಿ?ಮಠದ ಆಡಳಿತಾಧಿಕಾರಿ ಡಾ ಜಿ ಎನ್ ರಾಮಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು .ಎಸ್ ಜಿ ಬಾಳೇಕುಂದ್ರಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್ಮನ್ ಡಾ. ಎಫ್ ಸಿ ಮಾನ್ವಿ ಸ್ವಾಗತಿಸಿದರು ,ಪೂಜ್ಯ ಮಹಾಂತದೇವರು ಮತ್ತು ಪೆÇ್ರ ಸಿ ಜಿ ಮಠಪತಿ ಅವರುಗಳು ಕಾರ್ಯಕ್ರಮವನ್ನು ನಿರ್ವಹಿಸಿದರು .ಸಮಾರಂಭದಲ್ಲಿ ಮಾಜಿ ಸಚಿವ ಶಿವಾನಂದ ಕೌಜಲಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು .

ಬೆಳಗಾವಿ ಸಮೀಪದ ಬಸವನ ಕುಡುಚಿ ದೇವರಾಜ ಅರಸ್ ಕಾಲೊನಿಯಲ್ಲಿರುವ ಶ್ರೀಮಠದಿಂದ ನಡೆಸಲಾಗುತ್ತಿರುವ ಶ್ರೀಮತಿ ಚನ್ನಮ್ಮ ಹಿರೇಮಠ ವೃದ್ಧಾಶ್ರಮದಲ್ಲಿ ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಗಳವರ ಮತ್ತೊಂದು ಪುತ್ಥಳಿಯನ್ನು ಸ್ವಾಮೀಜಿಗಳು ಅನಾವರಣಗೆuಟಿಜeಜಿiಟಿeಜಳಿಸಿದರು. ವೃದ್ಧಾಶ್ರಮದ ವ್ಯವಸ್ಥಾಪಕ ಶ್ರೀ ಎಂ ಎಸ್ ಚೌಗಲಾ ಉಪಸ್ಥಿತರಿದ್ದರು .