Belagavi News In Kannada | News Belgaum

ಗ್ರಾಹಕರಿಗೆ ಹಣಕಾಸು ಆಯ್ಕೆಗಳನ್ನು ಪರಿಚಯಿಸಲು ಕರ್ನಾಟಕ ಬ್ಯಾಂಕ್‍ನೊಂದಿಗೆ ಒಡಂಬಡಿಕೆ

 

ಬೆಳಗಾವಿ :ಗ್ರಾಹಕರೇ ಮೊದಲು ಎಂಬ ವಿಧಾನಕ್ಕೆ ಅನುಸಾರವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಭಾರತದ ಅಪಾರ ಸಂಖ್ಯೆಯ ನಗರಗಳು ಮತ್ತು ಪಟ್ಟಣಗಳ ಗ್ರಾಹಕರಿಗೆ ಸುಲಭ ಹಣಕಾಸು ಆಯ್ಕೆಗಳನ್ನು ಒದಗಿಸಲು ಕರ್ನಾಟಕ ಬ್ಯಾಂಕ್ ನೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ.

ನೂತನ ಸಹಭಾಗಿತ್ವದ ನಂತರ ಕರ್ನಾಟಕ ಬ್ಯಾಂಕ್ ಟಿಕೆಎಂ ಮಾರಾಟ ಮಾಡುವ ಸಂಪೂರ್ಣ ಶ್ರೇಣಿಯ ವಾಹನಗಳಿಗೆ ಆದ್ಯತೆಯ ಫೈನಾನ್ಸಿಯರ್‍ಗಳಲ್ಲಿ ಒಂದಾಗಿದೆ. ಖಾಸಗಿ ಮತ್ತು ವಾಣಿಜ್ಯ ಬಳಕೆಗಾಗಿ ಟೊಯೋಟಾ ವಾಹನಗಳನ್ನು ಖರೀದಿಸಲು ಆದ್ಯತೆ ವಲಯದ ಯೋಜನೆಗಳ ಅಡಿಯಲ್ಲಿ ಬರುವವು ಸೇರಿದಂತೆ ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಹಣಕಾಸು ಆಯ್ಕೆಗಳು ಗ್ರಾಹಕರಿಗೆ ದೊರೆಯಲಿದೆ.

ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್, ಮಾತನಾಡಿ, ಇದು ನಮ್ಮ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಸೇವೆಯನ್ನು ಒದಗಿಸಲು ಕರ್ನಾಟಕ ಬ್ಯಾಂಕ್ ಮತ್ತು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಎಂಬ ಎರಡು ಮಹಾನ್ ಬ್ರಾಂಡ್ ಗಳ ಸಹಯೋಗದ ಪ್ರಯತ್ನವಾಗಿದೆ. ಟಿಕೆಎಂ ನೊಂದಿಗೆ ಸಹಕರಿಸಲು ನಮಗೆ ಸಂತೋಷವಾಗಿದೆ ಎಂದರು.

ಟಿಕೆಎಂನ ವ್ಯೂಹಾತ್ಮಕ ವ್ಯವಹಾರ ಘಟಕದ ಉಪಾಧ್ಯಕ್ಷ (ವಿಪಿ) ಆರ್ ವೆಂಕಟಕೃಷ್ಣನ್ ಮಾತನಾಡಿ, ಸುಲಭ ಹಣಕಾಸು ಆಯ್ಕೆಗಳಿಗಾಗಿ ಸಮಯೋಚಿತ ಮತ್ತು ಸಂಬಂಧಿತ ಯೋಜನೆಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಅನುಕೂಲವನ್ನು ಹೆಚ್ಚಿಸಲು ಮತ್ತು ಸಹಾಯ ಮಾಡಲು ಟಿಕೆಎಂ ಯಾವಾಗಲೂ ಶ್ರಮಿಸುತ್ತದೆ. ಈ ಒಪ್ಪಂದವು ಅಂತಹ ಒಂದು ಪ್ರಯತ್ನವಾಗಿದೆ, ಇದು ನಮ್ಮ ಗ್ರಾಹಕರಿಗೆ ತೊಂದರೆಯಿಲ್ಲದ ಮತ್ತು ತಡೆರಹಿತ ಖರೀದಿ ಅನುಭವಕ್ಕಾಗಿ ಹೊಸ ಯುಗದ ಬ್ಯಾಂಕಿಂಗ್ ಮತ್ತು ಹಣಕಾಸು ಪರಿಹಾರಗಳನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.

ನಿರಂತರವಾಗಿ ಸಂಪನ್ಮೂಲ ಹಣಕಾಸು ಯೋಜನೆಗಳು ಮತ್ತು ಪ್ಯಾಕೇಜ್ ಗಳೊಂದಿಗೆ ಆಗಮಿಸ ಮೂಲಕ ಹಲವು ವರ್ಷಗಳಿಂದ ಟಿಕೆಎಂ ತನ್ನ ಗ್ರಾಹಕ-ಮೊದಲ ನೀತಿಗೆ ಬದ್ಧವಾಗಿಯೇ ಮುಂದುವರೆದಿದೆ, ಕರ್ನಾಟಕ ಬ್ಯಾಂಕಿನೊಂದಿಗಿನ ಪಾಲುದಾರಿಕೆಯು ಟೊಯೋಟಾ ಗ್ರಾಹಕರಿಗೆ ಲಭ್ಯವಿರುವ ಯೋಜನೆಗಳ ಈ ಪಟ್ಟಿಯಲ್ಲಿ ಮತ್ತಷ್ಟು ಸೌಲಭ್ಯಗಳು ಹೆಚ್ಚಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.