Belagavi News In Kannada | News Belgaum

ಬೆಳ್ಳಿಹಬ್ಬದ ಅಂಚಿನಲ್ಲಿರುವ ಲೇಖಕಿಯರ ಸಂಘಕ್ಕೆ ಸ್ವಂತ ಸೂರಾಗಲಿ : ಸಾಹಿತಿ ಆಶಾ ಕಡಪಟ್ಟಿ

ದತ್ತಿನಿಧಿ ಕಾರ್ಯಕ್ರಮ

ಬೆಳ್ಳಿಹಬ್ಬದ ಅಂಚಿನಲ್ಲಿರುವ ಲೇಖಕಿಯರ ಸಂಘಕ್ಕೆ ಸ್ವಂತ ಸೂರಾಗಲಿ :

ಸಾಹಿತಿ ಆಶಾ ಕಡಪಟ್ಟಿ. ಗುರುವಾರ 9 ರಂದು ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ . ಸುಮಿತ್ರಾ ಚರಂತಿಮಠ, ದಿ.ಸರಸ್ವತಿ ದೇಸಾಯಿ,ದಿ. ಬಿ. ಬಿ. ಮೇಳೆದ,ದಿ. ಎಸ್ಎಸ್ ಪಾನಶೆಟ್ಟಿ, ದಿ. ಎಂ.ಎಂ ಚೌಗಲೆ ಇವರ ಹೆಸರಿನಲ್ಲಿ ಇಟ್ಟಿರುವ ದತ್ತಿನಿಧಿ ಯಲ್ಲಿ ‘ದತ್ತಿ ಕಾರ್ಯಕ್ರಮ’ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೋಳ್ಳಿ ಮಾತನಾಡಿ ಹಿರಿಯ ಸಾಹಿತಿಗಳ ಸ್ಪೂರ್ತಿಯಿಂದ ಮತ್ತು ಲೇಖಕಿಯರ ಆಸಕ್ತಿಯಿಂದ ಸಂಘ ಬೆಳೆಯುವುದರ ಜೊತೆಗೆ ಸಾಹಿತ್ಯಕ ಚಟುವಟಿಕೆಗಳು ಗಡಿನಾಡಿನಲ್ಲಿ ಗಟ್ಟಿಯಾಗುತ್ತಿವೆ.

ದತ್ತಿ ನಿಧಿಗಳು ಸಂಘಕ್ಕೆ ಆಸರೆಯಾಗಿವೆ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಆಶಾ ಕಡಪಟ್ಟಿ ಮಾತನಾಡಿ ಸುಮಾರು ಎರಡು ದಶಕಗಳಿಂದ ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ ಸಂಘ ತನ್ನದೇ ಆದ ಸೇವೆಯನ್ನು ಮಾಡುತ್ತಿದೆ.ಆದರೆ ಲೇಖಕಿಯರ ಸಂಘಕ್ಕೆ ತನ್ನದೇ ಆದ ಒಂದು ಸ್ವಂತ ಜಾಗವಿಲ್ಲ ಕಟ್ಟಡವಿಲ್ಲ. ಆ ನಿಟ್ಟಿನಲ್ಲಿ ಸಂಘದ ಎಲ್ಲಾ ಸದಸ್ಯರನ್ನು ಒಳಗೊಂಡಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುವುದರ ಮೂಲಕ ಲೇಖಕಿಯರ ಸಂಘಕ್ಕೆ ಸ್ವಂತ ಸೂರನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸೋಣ ಎಂದರು. ಕಾರ್ಯಕ್ರಮದಲ್ಲಿ ಇಂದಿರಾ ಮೋಟೆಬೆನ್ನೂರ ದತ್ತಿನಿಧಿ ಕೊಡಮಾಡಿದ ಅತಿಥಿಗಳನ್ನು ಪರಿಚಯಿಸಿ ಸಂಘದ ವತಿಯಿಂದ ಅವರನ್ನು ಸನ್ಮಾನಿಸಿದರು.

ದತ್ತಿ ದಾನಿಗಳಾದ ಭಾರತಿ ಮಠದ, ರೇಖಾ ಶ್ರೀನಿವಾಸ್, ವಾಸಂತಿ ಮೇಳೆದ, ಪ್ರೇಮಾ ಪಾನಶೆಟ್ಟಿ ಮತ್ತು ಹೀರಾ ಚೌಗುಲೆ ತಮ್ಮ ಹಿರಿಯರ ಕುರಿತಾದ ಮಾಹಿತಿ ಮತ್ತು ಅವರ ಕಾರ್ಯಕ್ಷೇತ್ರಗಳನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಲೇಖಕಿಯರ ಕವಿಗೋಷ್ಠಿ ಕಾರ್ಯಕ್ರಮ ಜರುಗಿತು. ಸಾಹಿತಿಗಳಾದ ಜ್ಯೋತಿ ಮಾಳಿ ಅಕ್ಕಮಹಾದೇವಿ ಹುಲಗಬಾಳಿ, ಉಮಾ ಅಂಗಡಿ, ಮಹಾನಂದ ಪಾರುಶೆಟ್ಟಿ,ಪ್ರಭಾ ಪಾಟೀಲ, ಮಮತಾ ಶಂಕರ, ಜಯಶೀಲ ಬ್ಯಾಕೋಡ, ಲೀಲಾ ಚೌಗುಲೆ, ಅನಿತಾ ಮಾಲಗತ್ತಿ,ಸುಮಾ ಕಿತ್ತೂರ,ಅಕ್ಕಮಹಾದೇವಿ ತೆಗ್ಗಿ, ರೇಣುಕಾ ಜಾಧವ ಕವನ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನೀಲಗಂಗಾ ಚರಂತಿಮಠ,ಅನ್ನಪೂರ್ಣ ಹಿರೇಮಠ, ಆಶಾ ಯಮಕನಮರಡಿ, , ಶುಭಾ ತೆಲಸಂಗ, ಮಂಜುಳಾ ತೆಲಸಂಗ, ಎಂ. ವೈ. ಮೆಣಸಿನಕಾಯಿ, ಮಧುಕರ್ ಗುಂಡೇನಟ್ಟಿ, ಎಸ್. ಬಿ.ಮಠಪತಿ, ಶಿವಾನಂದ ತಲ್ಲೂರ, ರಮೇಶ ಮಗದುಮ್, ವಿ. ಬಿ. ಅಂಗಡಿ, ರಮ್ಯಶ್ರೀ ತೆಲಸಂಗ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಜಯಶ್ರೀ ನಿರಾಕಾರಿ ಪ್ರಾರ್ಥಿಸಿದರು. ಜಯಶೀಲಾ ಬ್ಯಾಕೋಡ ವಂದಿಸಿದರು. ಕಾರ್ಯದರ್ಶಿಗಳಾದ ರಾಜನಂದಾ ಘಾರ್ಗಿ ನಿರೂಪಿಸಿದರು.