Belagavi News In Kannada | News Belgaum

ಕೃಷಿ ತಂತ್ರಜ್ಞಾನ ಸಪ್ತಾಹ

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರವು ಕೃಷಿ ತಂತ್ರಜ್ಞಾನ ಸಪ್ತಾಹವನ್ನು ದಿನಾಂಕ 13 ರಿಂದ 18 ಡಿಸೆಂಬರ್ 2021 ರವರೆಗೆ ಮತ್ತಿಕೊಪ್ಪ ಆವರಣದಲ್ಲಿ ಏರ್ಪಡಿಸಲಾಗಿದೆ.

ಜಿಲ್ಲೆಯ ಮುಖ್ಯ ಆಹಾರ ಬೆಳೆಗಳು, ಎಣ್ಣೆಕಾಳು, ದ್ವಿದಳ ದಾನ್ಯ, ಹತ್ತಿ, ಕಬ್ಬು ಹಾಗೂ ತೋಟಗಾರಿಕೆ ಬೆಳೆಗಳ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ತರಬೇತಿ/ಸಂವಾದ/ಕ್ಷೇತ್ರ ಬೇಟಿ ಮೂಲಕ ರೈತರಿಗೆ ತಲುಪಿಸಿ ಬೇಸಾಯದಲ್ಲಿ ಅಳವಡಿಸಲು ಪ್ರೇರೆಪಿಸುವುದು ಈ ಸಪ್ತಾಹದ ಮುಖ್ಯ ಉದ್ದೇಶ.
ಆರು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಸುಧಾರಿತ ತಳಿಗಳು,

 

ನೀರು ನಿರ್ವಹಣೆ, ಸಮಗ್ರ ಪೋಷಕಾಂಶ ನಿರ್ವಹಣೆ, ಮಣ್ಣಿನ ಆರೋಗ್ಯ, ಸವಳು ಭೂಮಿಗಳ ನಿರ್ವಹಣೆ, ಸಂರಕ್ಷಿತ ಕೃಷಿ, ಎರೆಹುಳು ಗೊಬ್ಬರ ಉತ್ಪಾದನೆ, ಸಸ್ಯ ರೋಗ/ಕೀಟ ನಿರ್ವಹಣೆ, ಹೈನುಗಾರಿಕೆ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ತಂತ್ರಜ್ಞಾನಗಳ ಮಾಹಿತಿಯನ್ನು ರೈತರಿಗೆ ನೀಡಲಾಗುವುದು.

ಆಸಕ್ತ ರೈತರು ಈ ಸಪ್ತಾಹದಲ್ಲಿ ಭಾಗವಹಿಸಲು ದೂರವಾಣಿ ಕರೆ ಮೂಲಕ ಹೆಸರು ನೊಂದಾಯಿಸುವಂತೆ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಶ್ರೀಮತಿ ಶ್ರೀದೇವಿ ಬ. ಅಂಗಡಿಯವರು ಕೋರಿದ್ದಾರೆ. ಮೊ: 9535604747 ಸಂಪರ್ಕಿಸಿ ವಿವರ ಪಡೆಯಬಹುದು.