Belagavi News In Kannada | News Belgaum

ರಸ್ತೆಯಲ್ಲಿ ಕತ್ತು ಕೊಯ್ದು ಕೊಲೆ

ರಾಮನಗರ : ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನ ನಡುರಸ್ತೆಯಲ್ಲಿ ಕತ್ತು ಕೊಯ್ದು ಕೊಲೆ ಮಾಡಿರುವ ಭೀಕರ ಘಟನೆ ತಾಲ್ಲೂಕಿನ ಅರಳಿಮರದೊಡ್ಡಿ ಗ್ರಾಮದಲ್ಲಿ ನಡೆದಿದೆ.

 

ಕಳೆದ ಒಂದು ವಾರದ ಹಿಂದೆ ಗಂಡನ ಜೊತೆ ಗಲಾಟೆ ಮಾಡಿಕೊಂಡು ಮಂಗಳಗೌರಿ ಅಕ್ಕನ ಮನೆಗೆ ಬಂದಿದ್ದರು.ಈ ವೇಳೆ ರಾಮನಗರದಲ್ಲಿ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಗಾರ್ಮೆಂಟ್ ನ ಬಸ್ ಹಿಂಬಾಲಿಸಿ ಬಂದ ಪತಿ ಸತೀಶ್ ಚಾಕುವಿನಿಂದ ಕತ್ತು ಕೊಯ್ದ ಬರ್ಬರವಾಗಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ.

 

ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮಹಿಳೆಯ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.