Belagavi News In Kannada | News Belgaum

ಪರಿಷತ್ ಚುನಾವಣೆಯಲ್ಲಿ ಉಲ್ಟಾ ಹೊಡೆದ ಬಿಜೆಪಿ ಲೆಕ್ಕಾಚಾರ

ಬಳ್ಳಾರಿ : ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮತದಾಸೆಗೆ ಗ್ರಾಪಂ.ಸದಸ್ಯರಿಗೆ ಸೀರೆ, ಬೆಳ್ಳಿ ನಾಣ್ಯಗಳ ಆಮಿಷ ನೀಡಿ ಮತ ಸೆಳೆಯುವ ಪ್ರಯತ್ನ ಬಳ್ಳಾರಿಯಲ್ಲಿ ಉಲ್ಟಾ ಹೊಡೆದಿದೆ.

 

ವಿಧಾನ ಪರಿಷತ್ ಚುನಾವಣೆ ಸಲುವಾಗಿ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿ ಗ್ರಾಪಂ ಸದಸ್ಯರ ಮತದಾಸೆಯ ಸಲುವಾಗಿ ಬಿಜೆಪಿ ಮುಖಂಡರು ಸೀರೆ ಹಾಗೂ ಬೆಳ್ಳಿ ನಾಣ್ಯಗಳನ್ನು ಹಂಚಿದ್ದರು ಎನ್ನಲಾಗಿದೆ.

 

ಆದರೆ, ಚುನಾವಣೆ ಮುಗಿದ ಬಳಿಕ ಬಿಜೆಪಿ ಮುಖಂಡರು ನೀಡಿದ್ದ 11 ಸೀರೆ, 11 ಬೆಳ್ಳಿ ಕಾಯಿನ್​ಗಳನ್ನು ಕಾಂಗ್ರೆಸ್ ಗ್ರಾಮ ಪಂಚಾಯಿತಿ ಸದಸ್ಯರು ವಾಪಸ್ ನೀಡಿದ್ದಾರೆ. ನಾವು ಸೀರೆ, ಕಾಯಿನ್​ಗೆಲ್ಲ ಬಗ್ಗಲ್ಲ.

 

ನಮಗೆ ಪಕ್ಷ ಮುಖ್ಯ, ನಾವು ಬಿಜೆಪಿಗೆ ಮತ ಹಾಕಿಲ್ಲ. ನಾವು ಕಾಂಗ್ರೆಸ್​ ಪಕ್ಷದವರು  ಎಂದು ಬಿಜೆಪಿ ನೀಡಿದ್ದ 11 ಸೀರೆ 11 ಬೆಳ್ಳಿ ಕಾಯಿನ್​ಗಳನ್ನು ವಾಪಸ್ ನೀಡಿದ್ದಾರೆ. ಈ ವಿಡಿಯೋ ಈಗ ಫುಲ್ ವೈರಲ್ ಆಗಿದೆ.