Belagavi News In Kannada | News Belgaum

ಕಾಂಗ್ರೆಸ್ ಪಕ್ಷವು ಜನರ ಧ್ವನಿಯನ್ನು ಗುರುತಿಸುತ್ತದೆ. ಕಾಂಗ್ರೆಸ್ ಪಕ್ಷವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಗೋವಾದ ಜನರ ಹಿತ ಕಾಪಾಡಲು ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ

ಪಣಜಿ: ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರವೇ ಗೋವಾದ ಸಂಸ್ಕೃತಿ ರಕ್ಷಣೆಯಾಗಲಿದೆ,  ಗೋವನ್ನರ ಧ್ವನಿ ಉಳಿಯಲಿದೆ, ಗೋವನ್ನರ ಕೈಯಲ್ಲಿ ಗೋವಾ ಉಳಿಯಲಿದೆ. ಕಾಂಗ್ರೆಸ್ ಪಕ್ಷವು ಜನರ ಧ್ವನಿಯನ್ನು ಗುರುತಿಸುತ್ತದೆ. ಕಾಂಗ್ರೆಸ್ ಪಕ್ಷವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಗೋವಾದ ಜನರ ಹಿತ ಕಾಪಾಡಲು ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನುಡಿದರು.

ಗೋವಾ ವಾಸ್ಕೊದ ಚಿಕಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು- ಸಮಾಜಕ್ಕಿಂತ ತಮ್ಮ ಪಕ್ಷವನ್ನು ದೊಡ್ಡದಾಗಿಸಬೇಕು ಎಂಬ ಮನಸ್ಥಿತಿಯ ಅನೇಕ ಪಕ್ಷಗಳು ಗೋವಾಕ್ಕೆ ಬಂದಿವೆ. ಗೋವಾದಲ್ಲಿ ಬದಲಾವಣೆ ತರಬೇಕಾದರೆ, ಅಭಿವೃದ್ಧಿ ಬೇಕಾದರೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಪ್ರಿಯಾಂಕಾ ಗಾಂಧಿ ಜನತೆಯ ಬಳಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಮಾತನಾಡಿ- ನಮಗೆ ಬಂಗಾಳಿ ಪಕ್ಷ ಬೇಡ, ದೆಹಲಿ ಪಕ್ಷವೂ ಬೇಡ. ರಾಜ್ಯ ಬಿಜೆಪಿ ಸರ್ಕಾರ ಜನರ ಧ್ವನಿಯನ್ನು ಹತ್ತಿಕ್ಕುತ್ತಿದೆ. ಮುಂದಿನ ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದರು.

ಈ ಸಂದರ್ಭದಲ್ಲಿ ಗೋವಾ ಕಾಂಗ್ರೆಸ್ ಪ್ರಭಾರಿ ದಿನೇಶ್ ಗುಂಡೂರಾವ್, ಕಾಂಗ್ರೆಸ್ ರಾಷ್ಟ್ರೀಯ ನಾಯಕ ಪಿ.ಚಿದಂಬರಂ, ಗೋವಾ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್, ಮತ್ತಿತರರು ಉಪಸ್ಥಿತರಿದ್ದರು.