Belagavi News In Kannada | News Belgaum

ವಿಶೇಷಚೇತನರ ಹಾಗೂ ಏಡ್ಸ ದಿನಾಚರಣೆ2021 ಹಿನ್ನೆಲೆಯಲ್ಲಿದಿನಾಂಕ 10-12-2021 ರಂದುವಿಶೇಷ ಸಾಧನೆಗೈದ ವಿಕಲಾಂಗಚೇತನರ ಸನ್ಮಾನ

ನಗರದಕ್ರಾಂತಿ ಮಹಿಳಾ ಮಂಡಳಮತ್ತು ಉಮಾ ಸಂಗೀತ ಪ್ರತಿಷ್ಥಾನಹಿಂದವಾಡಿವತಿಯಿಂದಅಂತರಾಷ್ಟ್ರೀಯ ವಿಶೇಷಚೇತನರ ಹಾಗೂ ಏಡ್ಸ ದಿನಾಚರಣೆ2021 ಹಿನ್ನೆಲೆಯಲ್ಲಿದಿನಾಂಕ 10-12-2021 ರಂದುವಿಶೇಷ ಸಾಧನೆಗೈದ ವಿಕಲಾಂಗಚೇತನರಸನ್ಮಾನ ಕಾರ್ಯಕ್ರಮವನ್ನು ಆಂಜನೇಯ ನಗರದಜೆಬಿ ಸ್ಪೋಟ್ರ್ಸ ಫೌಂಡೇಶನ್‍ದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿಯ ಆಂಜನೇಯ ನಗರದ ಜೆಬಿ ಸ್ಪೋಟ್ರ್ಸ ಫೌಂಡೇಶನ್‍ದ ಅಧ್ಯಕ್ಷರಾದ ಸಂತೋಷ ಜೋಶಿ ಹಾಗೂ ವಿಶ್ವಾಸ ಫೌಂಡೇಶನ್ ಫಾರ್ ಫಿಜಿಕಲಿ ಚಾಲೇಂಜ್ಡ ಇದರ ಸಂಸ್ಥಾಪಕರಾದ ಬಸಪ್ಪಾಸುನಧೋಳಿಯವರು ಅಥಿತಿಗಳಾಗಿ ಆಗಮಿಸಿದ್ದರು.

ಕ್ರಾಂತಿ ಮಹಿಳಾ ಮಂಡಳದ ಅಧ್ಯಕ್ಷರಾದ ಮಂಗಲ ಮಠದರವರು ಎಲ್ಲರನ್ನು ಸ್ವಾಗತಿಸುತ್ತಾ, ವಿಕಲತೆ ಅಥವಾ ನ್ಯೂನ್ಯತೆಎಂಬುದನ್ನು ಎಲ್ಲರೂ ಒಂದಿಲ್ಲಾ ಒಂದುರೀತಿಯಿಂದ ಬಳಲುತ್ತಿರುತ್ತಾರೆ. ನ್ಯೂನ್ಯತೆಯನ್ನು ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಎಂದು ವಿಂಗಡಿಸಬಹುದಾಗಿದೆ. ಇಂಥ ನ್ಯೂನ್ಯತೆಯನ್ನು ಮೆಟ್ಟಿನಿಂತು ಜೀವನದಲ್ಲಿ ಸಾಧನೆಗೈದ ಸಾವಿರಾರು ಜ್ವಲಂತ ಉದಾಹರಣೆಗಳಿವೆ.

 

ಅಷ್ಟೇನು ಉತ್ತಮ ಜ್ಞಾಪಕಶಕ್ತಿಇಲ್ಲದ ವಿಜ್ಞಾನಿ ಐನ್‍ಸ್ಟೇನ್, ಆಕ್ಸಫರ್ಡ ಯುನಿವ್ಹರ್ಸಿಟಿಯ ಪಿಎಚ್‍ಡಿ ಪದವಿಧರ ಸ್ಟೀಫನ್ ಹಾಕಿಂಗ, ಭರತ ನಾಟ್ಯ ಪ್ರವೀಣೆ ಹಾಗೂ ಸಿನಿಮಾ ತಾರೆ ಸುಧಾ ಚಂದ್ರನ್ ಅನೇಕರು ಆದರ್ಶಪ್ರಾಯರಾಗಿದ್ದಾರೆ. ಈದಿನ ಸನ್ಮಾನಗೊಳ್ಳುತ್ತಿರುವ ಕ್ರೀಡೆಯಲ್ಲಿ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ವಿಶೇಷಚೇತನರು ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆಂದರು.

 

ಅತಿಥಿ ಸಂತೋಷ ಜೋಶಿ, ಇಂದಿನ ಪೀಳಿಗೆ ಮೊಬೈಲಗೀಳನ್ನು ಹಚ್ಚಿಕೊಂಡು ಶಾರೀರಿಕವಾದ ಯಾವದೆ ವ್ಯಾಯಾಮವಿಲ್ಲದೆ ಅನೇಕ ಶಾರೀರಿಕ ಮಾನಸಿಕ ವ್ಯಾಧಿಗಳಿಗಳಿಗೆ ಬಲಿಯಾಗುತ್ತಿದ್ದು, ಇಂದು ಸನ್ಮಾನಗೊಳ್ಳುತ್ತಿರುವ ಕ್ರೀಡೆಯಲ್ಲಿ ಸಾಧನೆಗೈದವಿಕಲಚೇತನರುಇಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ಹಾರೈಸಿದರು.

 

ಇನ್ನೋರ್ವ ಅಥಿತಿಯಾದ ಬಸಪ್ಪಾ ಸುನಧೋಳಿಯವರು, ವಿಕಲಚೇತನರಿಗಾಗಿಯೇ ಮುಡಿಪಾಗಿರುವ ತಮ್ಮ ಸಂಸ್ಥೆಯು ನಡೆದು ಬಂದ ಹಾದಿಯನ್ನು ವಿವರಿಸುತ್ತ ಈ ಏಳು ಜನ ಕ್ರೀಡೆಯಲ್ಲಿಯ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವ ಕ್ರಾಂತಿ ಮಹಿಳಾ ಮಂಡಳಮತ್ತು ಉಮಾ ಸಂಗೀತ ಪ್ರತಿಷ್ಥಾನದ ಹಿರಿಮೆಯನ್ನು ಕೊಂಡಾಡಿದರು.

 

ರಾಷ್ಟ್ರೀಯ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿಕಲಚೇತನರಾದ ಆರತಿ ಪವಾರ, ಲಕ್ಷ್ಮೀ ರಾಯನ್ನವರ, ರಿಜುವಾನ್ ಜಮಾದಾರ, ಮಾಯವ್ವಾ ಸನ್ನಿಂಗನವರ, ಲಲಿತಾ ಗವಸ, ಫಕ್ಕೀರಪ್ಪಾ ಕರುವಿನಕೊಪ್ಪ, ಶ್ರೀಕಾಂತ ದೇಸಾಯಿ ಇವರನ್ನು ಸನ್ಮಾನಿಸಲಾಯಿತು.

 

ಶೋಭಾ ಹತ್ತರಕಿ, ಭಾರತಿ ಕೆರೂರ, ಪ್ರಾರ್ಥನಾಗೀತೆ ಹಾಡಿದರು.ಕಾರ್ಯದರ್ಶಿಗಳಾದ ರತ್ನಶ್ರೀ ಗುಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ದರ್ಶನಾ ನಿಲಜಗಿ, ರಾಜಶ್ರೀ ಬಾಲುನ್ನವರ, ರತ್ನಾ ಗುಡಗನಟ್ಟಿ ಅಥಿತಿಗಳ ಪರಿಚಯವನ್ನುಮಾಡಿದರು,ಭಾರತಿ ರತ್ನಪ್ಪಗೋಳವಂದನಾರ್ಪಣೆಯನ್ನು ಮಾಡಿದರು.ಪುಷ್ಪಾ ನಿಲಜಗಿಕಾರ್ಯಕ್ರಮವನ್ನು ನಿರೂಪಿಸಿದರು.