Belagavi News In Kannada | News Belgaum

ಅನುಭವ ಮಂಟಪ ಮಾದರಿಕಟ್ಟಡಕ್ಕೆಅನುದಾನ ಕೋರಿದ :ಶಾಸಕ ಅನಿಲ ಬೆನಕೆ

ಬೆಳಗಾವಿ,  ಬಸವ ತತ್ವದ ಪ್ರಸಾರದಉದ್ದೇಶದಿಂದ ನಗರದಲ್ಲಿಅನುಭವ ಮಂಟಪ ಮಾದರಿಯಕಟ್ಟಡ ನಿರ್ಮಾಣಕ್ಕೆಯೋಜನೆರೂಪಿಸಲಾಗುತ್ತಿದ್ದುಇದಕ್ಕೆ ವಿಶೇಷ ಅನುದಾನ ನೀಡಬೇಕುಎಂದು ಬೆಳಗಾವಿ ಉತ್ತರಕ್ಷೇತ್ರದ ಶಾಸಕ ಅನಿಲ ಬೆನಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರಿಗೆ ಮನವಿ ಮಾಡಿದರು.

ವಿಧಾನ ಪರಿಷತ್‍ಚುನಾವಣೆಗೆ ಹಾವೇರಿಯ ಶಿಗ್ಗಾಂವಿಯಲ್ಲಿಮತ ಚಲಾಯಿಸಿದ ಬಳಿಕ ಬೆಂಗಳೂರಿಗೆ ತೆರಳಲು ಬೆಳಗಾವಿ ವಿಮಾನ ನಿಲ್ದಾನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅನಿಲ ಬೆನಕೆ ಈ ಬಗ್ಗೆ ಮನವಿ ಸಲ್ಲಿಸಿದರು.

 

ಬೆಳಗಾವಿಯಲ್ಲಿ ಡಿ. 13 ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಳ ಅಧಿವೇಶನದಕೊಡುಗೆಯರೂಪದಲ್ಲಿಕಟ್ಟಟಕ್ಕಾಗಿ ವಿಶೇಷ ಅನುದಾನಒದಗಿಸಬೇಕು.ಅಲ್ಲದೇ ನಗರದ ಪ್ರಮುಖ ವೃತ್ತಗಳಲ್ಲಿ ಈ ಭಾಗದಇತಿಹಾಸದ ಮಹತ್ವ ಸಾರುವರಚನೆ ನಿರ್ಮಾಣಕ್ಕೆಅನುದಾನ ನೀಡಬೇಕುಎಂದುಕೋರಿದರು.