Belagavi News In Kannada | News Belgaum

ಗಂಡನಿಲ್ಲದ ಸಮಯದಲ್ಲಿ ಪ್ರೇಯಸಿ ಮನೆಗೆ ಬಂದ ಜೆಡಿಎಸ್ ಮುಖಂಡ, ಗ್ರಾಪಂ. ಸದಸ್ಯನ ಬರ್ಬರ ಹತ್ಯೆ!

ಆನೇಕಲ್ : ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ನಾರಾಯಣ ಸ್ವಾಮಿ ಎಂಬುವವರನ್ನು ಮತ್ತು ಓರ್ವ ಮಹಿಳೆಯನ್ನು ಮನೆಯೊಂದರಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ಚಂದಾಪುರದಲ್ಲಿ ನಡೆದಿದೆ.

ಚಿಕ್ಕಹಾಗಡೆಯ ಹಾಲಿ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ಹತ್ಯೆಯಾದ ಜೆಡಿಎಸ್ ಮುಖಂಡ. ಈತ ಅದೇ ಊರಿನ ಕಾವ್ಯ ಎನ್ನುವ ವಿವಾಹಿತ ಮಹಿಳೆಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಆಕೆಯ ಗಂಡ ಇಲ್ಲದ ಸಮಯ ನೋಡಿಕೊಂಡು ಶನಿವಾರ ಸಂಜೆ ಕಾವ್ಯ ಮನೆಗೆ ನಾರಾಯಣಸ್ವಾಮಿ ತೆರಳಿದ್ದಾರೆ. ಆ ಸಮಯದಲ್ಲಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಇಬ್ಬರನ್ನೂ ಹತ್ಯೆ ಮಾಡಿದ್ದಾರೆ.

ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು. ಆದ್ದರಿಂದ ಕಾವ್ಯಳ ಗಂಡ ಮುತ್ತುರಾಜ್ ಸ್ನೇಹಿತರನ್ನು ಕರೆದುಕೊಂಡು ಬಂದು ಈ ಕೊಲೆಗಳನ್ನ ಮಾಡಿದ್ದಾನೆ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.////