Belagavi News In Kannada | News Belgaum

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ಮೆಲೇ ಅತೀವೃಷ್ಟಿ, ಬರಗಾಲ: ಸರ್ಕಾರಕ್ಕೆ ತೀಕ್ಷಣವಾಗಿ ಚಾಟಿ ಬಿಸಿದ ವಿಪಕ್ಷ ನಾಯಕ ಸಿದ್ಧರಾಯಮಯ್ಯ

ಬೆಳಗಾವಿ(ವಿಧಾನ ಸಭೆ): ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ಮೆಲೆ ಅತೀವೃಷ್ಟಿ, ಬರಗಾಲ ಬಂದಿದ್ದೆ ಎಂದು ವಿಪಕ್ಷ ನಾಯಕ ಸಿದ್ಧರಾಯಮಯ್ಯ  ಸರ್ಕಾರಕ್ಕೆ ತೀಕ್ಷಣವಾಗಿ ಚಾಟಿ ಬಿಸಿದರು.  ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ  ಸಚಿವ ಆರ್ . ಅಶೋಕ  ಬರಗಾಲ ಇಲ್ಲ.. ಕೇವಲ  ಬರೀ ಮಳೆ ಎಂದು ಸಮಜಾಯಿಸಿಕೊಂಡರು.

ಇಂದಿನ ವಿಧಾಸಭಾ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ  ವಿಪಕ್ಷ ನಾಯಕ ಸಿದ್ಧರಾಯಮಯ್ಯ  ಅವರು,  2019 ರಲ್ಲಿ ಯಡಿಯೂರಪ್ಪನವರು ಸಿಎಂ ಆಗಿ  ಅಧಿಕಾರ ಸ್ವೀಕರಿಸಿದರು. ಅಂದಿನಿಂದ ಇಂದನಿಂದ ವರೆಗೂ ರಾಜ್ಯದ ಜನತೆಗೆ ಸೂರ್ಯನನ್ನೆ ಕಂಡಿಲ್ಲ, ಯಾರು ಊಹಿಸಲಾಗ ಮಳೆ ರಾಜ್ಯದಲ್ಲಿ ಆಗಿದೆ ಎಂದರು. ಆ ಅತೀವೃಷ್ಟಿ ನೆನೆಸಿಕೊಳ್ಳಲು ಬಾರದು, ಇದು ಬಿಜೆಪಿ ಸರ್ಕಾರ ಕೊಡುಗೆನಾ,  ಆವಾಗ ಆಗಿರುವ ದುರಂತ ಇಲ್ಲಿವರೆಗೂ ರಾಜ್ಯದ ಜನತೆ ಕಣ್ಣಿರಿನಲ್ಲಿ ಕೈ ತೊಳೆದಿದೆ. ಪರಿಹಾರ ನೀಡಿಲ್ಲ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ವಿ.ಸೋಮಣ್ಣಅದು ಪ್ರಕೃತಿ ನಿಯಮ ನಮ್ಮಲಿಲ್ಲ, ನಾವು ಅಧಿಕಾರಕ್ಕೆ ಬಂದ ಬಳಿಕ ರಾಜ್ಯವೂ ಹಚ್ಚು ಹಸಿರಾಗಿ ಕಂಗೊಳಿಸುತ್ತಿದೆ ಎಂದರು.

ಸದನದಲ್ಲಿ ಪೆಟ್ರೋಲ್ ಪ್ರತಿಧ್ವನಿ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೂ ಒಗ್ಗಟ್ಟಾಗಿ  ಪೆಟ್ರೋಲ್ ಬೆಲೆ ಯನ್ನು ನಿತ್ಯವೂ ಏರಿಕೆ ಮಾಡುತ್ತಿದೆ. ಮೂರು  ತಿಂಗಳಿನಲ್ಲಿ 100 ಭಾರೀ ತೈಲ ಬೆಲೆ ಈ ಸರ್ಕಾರ  ಏರಿಕೆ ಮಾಡಿದೆ.  ಬೆಲೆ ಹೊಡೆತಕ್ಕೆ  ಜನರು ವಾಹನಗಳನ್ನು ಬಿಟ್ಟು ಸೈಕಲ್ ತುಳಿಯುವ ಸ್ಥಿತಿ ನಿರ್ಮಾಣ ಮಾಡಿದೆ.  ಯಾವ ಕಾಲದಲ್ಲಿ ಸಾಗುತ್ತಿದೆ ಈ ಜಮಾನ ಎಂದರು ಕಿಡಿಕಾರಿದರು. /////