Belagavi News In Kannada | News Belgaum

ಭಾರತ ದೇಶ ಪ್ರಪಂಚಕ್ಕೆ ಶಾಂತಿಯನ್ನು ನೀಡುವ ಮೂಲಕ ಆಧ್ಯಾತ್ಮಿಕ ತಳಹದಿ ಹೊಂದಿರುವ ಈ ದೇಶದ ಪವಿತ್ರ ನೆಲದ ಕಾಶಿ ವಿಶ್ವನಾಥನ ಸೂ ಕ್ಷೇತ್ರವನ್ನು ದಿವ್ಯ ಕಾಶಿ ಭವ್ಯ ಕಾಶಿ ಹೆಸರಿನೊಂದಿಗೆ

ಬೆಳಗಾವಿ ಭಾರತ ದೇಶ ಪ್ರಪಂಚಕ್ಕೆ ಶಾಂತಿಯನ್ನು ನೀಡುವ ಮೂಲಕ ಆಧ್ಯಾತ್ಮಿಕ ತಳಹದಿ ಹೊಂದಿರುವ ಈ ದೇಶದ ಪವಿತ್ರ ನೆಲದ ಕಾಶಿ ವಿಶ್ವನಾಥನ ಸೂ ಕ್ಷೇತ್ರವನ್ನು ದಿವ್ಯ ಕಾಶಿ ಭವ್ಯ ಕಾಶಿ ಹೆಸರಿನೊಂದಿಗೆ ಅಭಿವೃದ್ಧಿಪಡಿಸಲು ಹೊರಟಿರುವ ಜಗತ್ತಿನ ಅಗ್ರಗಣ್ಯ ನಾಯಕ ನರೇಂದ್ರ ಮೋದಿಯವರಿಗೆ ದೇಶದ ಜನತೆ ಕೃತಜ್ಞತೆ ಸಲ್ಲಿಸಬೇಕು ಎಂದು ಮುರುಗೋಡ ಮಹಾಂತ ಮಠದ ನೀಲಕಂಠ ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು ಸಮೀಪದ ಪಂತ್ ನಗರದಲ್ಲಿರುವ ಶಿವಾಲಯದಲ್ಲಿ ಹಮ್ಮಿಕೊಂಡಿದ್ದ ದಿವ್ಯ ಕಾಶಿ ಭವ್ಯ ಕಾಶಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ ದೇಶದ ಜನತೆಗೆ ಗಂಗಾ ನದಿ ಪವಿತ್ರ ನದಿ ಎಂಬ ಭಾವನೆ ಮನಸ್ಸಿನಲ್ಲಿದ್ದರೂ ವಾಸ್ತವಿಕವಾಗಿ ಸುಟ್ಟು ಹೆಣಗಳ ರಾಶಿಯನ್ನು ನೋಡುವ ಮಾನವೀಯ ಕುಲವೇ ಅಸಹನೀಯ ಪಡುವಂತಹ ಸ್ಥಿತಿಯನ್ನು ಇಂದು ಪ್ರಪಂಚದ ನಾನಾ ಭಾಗಗಳಿಂದ ಗಂಗಾ ನದಿ ಗಂಗಾ ಆರತಿ ಕಾಶಿ ವಿಶ್ವನಾಥನ ದೇಗುಲ ನೋಡಲು ದಿನಂಪ್ರತಿ ಲಕ್ಷಾಂತರ ಜನ ಬರುವಂತಹ ಧಾರ್ಮಿಕ ಕ್ಷೇತ್ರವನ್ನಾಗಿಸು ಸಂಕಲ್ಪ ತೊಟ್ಟು ಯಶಸ್ವಿಯಾಗಿ ಇಂದು ಮತ್ತೆ ಭವ್ಯವಾದ ಕಾಶಿಯಲ್ಲಿ ದಿವ್ಯ ಪ್ರಕರ ಜ್ಯೋತಿ ಬೆಳಗಿಸಲಿರುವ ನರೇಂದ್ರ ಮೋದಿಯವರ ಕಾರ್ಯ ಪ್ರಪಂಚವೇ ಕೊಂಡಾಡುತ್ತಿದೆ ಎಂದರು 50 ವರ್ಷಗಳ ಹಿಂದೆ ಆರು ವರ್ಷಗಳ ಕಾಲ ನಿರಂತರ ಅಭ್ಯಾಸ ಮಾಡುವ ಮೂಲಕ ಆ ನೆನಪು ಸದಾ ನನ್ನ ಮನಸ್ಸಿನಲ್ಲಿ ಇದ್ದು ಸಾವಿರಾರು ದೇವರುಗಳನ್ನು ಒಳಗೊಂಡ ಕಾಶಿಯ ಅಭಿವೃದ್ಧಿ ಕಾರ್ಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಹೆಮ್ಮೆ ತರುತ್ತದೆ ಎಂದರು ಪ್ರಪಂಚದಲ್ಲಿ ಸಾಧು- ಸಂತರಿಗೆ ಗೌರವ ತಂದುಕೊಡುವ ಪುಣ್ಯಭೂಮಿ ಭಾರತದಲ್ಲಿ ತ್ರಿವೇಣಿ ನದಿಗಳ ಸಂಗಮವಾಗಿರುವ ಪ್ರಯಾಗದಲ್ಲಿ ನಡೆಯುವ ಕುಂಭಮೇಳ ಅಲ್ಲಿಯ ಸ್ನಾನ ಅತ್ಯಂತ ಪವಿತ್ರವಾಗಿದ್ದು ಪ್ರಪಂಚಕ್ಕೆ ಧಾರ್ಮಿಕತೆಯನ್ನು ತಿಳಿಸಿಕೊಡುವ ಪವಿತ್ರ ಕಾರ್ಯಗಳಾಗಿವೆ ಇಂತಹ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುವುದರಿಂದ ಭಾರತ ವಾಸಿಗಳು ನೆಮ್ಮದಿಯ ಜೀವನ ನಡೆಸುವುದರೊಂದಿಗೆ ಪ್ರಪಂಚಕ್ಕೆ ಶಾಂತಿ ನೀಡಲಿದ್ದಾರೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ ಎಪ್ಪತ್ತೈದು ವರ್ಷಗಳ ಸ್ವತಂತ್ರ ಭಾರತದಲ್ಲಿ ಎದುರಿಸುತ್ತಿರುವ ರಾಮಂದಿರ ನಿರ್ಮಾಣ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ದೇಶದ ಜನಮಾನಸದಲ್ಲಿ ಉಳಿದಿರುವ ನರೇಂದ್ರ ಮೋದಿ ಅವರ ಕಾರ್ಯ ಅತ್ಯಂತ ಹೆಮ್ಮೆ ತರುವಂತದ್ದು ಎಂದರು ನ್ಯಾಯವಾದಿ ಎಫ್ ಎಸ್ ಸಿದ್ದನಗೌಡರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಜಿಲ್ಲಾ ಸಂಚಾಲಕ ಯುವರಾಜ್ ಜಾದವ್ ಕಾರ್ಯಕ್ರಮದ ರೂಪರೇಷೆಗಳನ್ನು ಹೇಳಿದರು ವೇದಿಕೆ ಮೇಲೆ ವಿಭಾಗ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ್ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮ ನವರ್ ಶೆಟ್ಟರ್ ಇದ್ದರು ಡಾ. ಗುರುಪ್ರಸಾದ ಕೋತಿನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
ಕಾರ್ಯಕ್ರಮದಲ್ಲಿ ಡಾ ಸಂಜೀವ್ ಕುಲಕರ್ಣಿ ಜಿತೇಂದ್ರ ಮಾದರ ವೀರಭದ್ರಯ್ಯ ಪೂಜಾರಿ ನಿತಿನ್ ಚೌಗುಲೆ ಸಂತೋಷ್ ದೇಶನೂರು ಯಲ್ಲೇಶ್ ಕೋಲ್ಕಾರ್, ರಮೇಶ್ ಸರ್ವೊದಯ, ಸಾಗರ ಶೇರೆಕಾರ, ಅಭಯ ಅವಲಕ್ಕಿ, ಕಮಲಾಕರ ಕೊಲ್ಕಾರ, ಅಡವೇಶ ಅಂಗಡಿ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು ಸಾವಿರಾರು ಜನ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ಕಾರ್ಯಕ್ರಮ ವೀಕ್ಷಿಸಿದರು
ಕಾರ್ಯಕ್ರಮ ಮೊದಲು ಶಿವನ ದೇವಾಲಯದಲ್ಲಿ ಅಭಿಷೇಕ ವಿಶೇಷ ಪೂಜೆ ಮಂಗಳಾರತಿ ಪ್ರಸಾದ ವಿತರಣ ಕಾರ್ಯಕ್ರಮಗಳು ನಡೆದವು

ದೇಶದ ಸಾಮರಸ್ಯ ಸಮಗ್ರತೆ ಏಕತೆಯ ಸಂಕೇತವಾಗಿರುವ ಭವ್ಯ ಕಾಶಿ ಮತ್ತು ದಿವ್ಯ ಕಾಶಿ ಕಾರ್ಯಕ್ರಮ ಭಾರತೀಯರಿಗೆ ಹಬ್ಬವಾಗಿ ಪರಿಣಮಿಸಿದ್ದು ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಕಾರ್ಯ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಸಾವಿರಾರು ಸಂಖ್ಯೆಯಲ್ಲಿ ಸಾಧು-ಸಂತರ ಸಮ್ಮುಖದಲ್ಲಿ ದಿವ್ಯ ಕಾಶಿ ಭವ್ಯ ಕಾಶಿ ಉದ್ಘಾಟನೆ ಗೊಳ್ಳುತ್ತಿರುವುದು ಪ್ರಪಂಚಕ್ಕೆ ಭಾರತ ವಿಶ್ವಗುರು ಎನ್ನುವುದನ್ನು ಸಾಬೀತುಪಡಿಸಿದಂತಾಗಿದೆ.

ನ್ಯಾಯವಾದಿ ಎಫ್ ಎಸ್ ಸಿದ್ದನಗೌಡರ