Belagavi News In Kannada | News Belgaum

ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯವು ಪಠ್ಯದ ಜೊತೆ-ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂಚೂಣಿ ಸ್ಥಾನ

ಬೆಳಗಾವಿ : ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯವು ಪಠ್ಯದ ಜೊತೆ-ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂಚೂಣಿ ಸ್ಥಾನದಲ್ಲಿ ಹೆಜ್ಜೆ ಹಾಕುತ್ತ ಸಾಗುತ್ತಿದೆ.

ಭಾರತ ಸರಕಾರದ ಅಣುಶಕ್ತಿ ಮತ್ತು ಖನಿಜ ಸಂಶೋಧನೆ ಹಾಗೂ ಅನುಸಂಧಾನ ನಿರ್ದೇಶನಾಲಯ ದಕ್ಷಿಣ ವಲಯದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2021ರ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಅಭಿನಂದನಾರ್ಹರಾಗಿದ್ದಾರೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ (1) ಕುಮಾರ: ವೀರಾಜ ಎಸ್. ಚಿತ್ರಗಾರ, ಪಿಯುಸಿ ದ್ವಿತೀಯ ವರ್ಷ, ಪ್ರಥಮ ಬಹುಮಾನ (2) ಕುಮಾರಿ: ನಿಧಿ ಪಾಟೀಲ, ಪಿಯುಸಿ ದ್ವಿತೀಯ ವರ್ಷ, ದ್ವಿತೀಯ ಬಹುಮಾನ (3) ಕುಮಾರ: ಸುಜಯ ಎಸ್. ಜೈನ, ಪಿಯುಸಿ ದ್ವಿತೀಯ ವರ್ಷ, ತೃತೀಯ ಬಹುಮಾನಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಪ್ರಬಂಧ ಸ್ಪರ್ಧೆಯಲ್ಲಿ (1) ಕುಮಾರಿ: ಸಂಗೀತಾ ಅರ್ಜುನಸಿಂಘ ಧಾಮಿ, ಪಿಯುಸಿ ದ್ವಿತೀಯ ವರ್ಷ, ಪ್ರಥಮ ಬಹುಮಾನ (2) ಕುಮಾರ: ಸಾತ್ವಿಕ ಎಸ್. ಸನದಿ, ಪಿಯುಸಿ ದ್ವಿತೀಯ ವರ್ಷ, ದ್ವಿತೀಯ ಬಹುಮಾನ (3) ಕುಮಾರಿ: ತನ್ವಿ ಸಬ್ನಿಸ್, ಪಿಯುಸಿ ದ್ವಿತೀಯ ವರ್ಷ, ತೃತೀಯ ಬಹುಮಾನಗಳನ್ನು ಪಡೆದು ಪ್ರಶಂಸಾರ್ಹರಾಗಿದ್ದಾರೆ.

ವಿದ್ಯಾರ್ಥಿಗಳ ಸಾಂಸ್ಕøತಿ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ. ವ್ಹಿ.ಸಿ. ಕಾಮಗೋಳ, ಕೆ.ಎಲ್.ಇ. ಸಂಸ್ಥೆಯ ಆಜೀವ ಸದಸ್ಯರಾದ ಶ್ರೀ. ಎಸ್.ಜಿ. ನಂಜಪ್ಪನವರ ಅವರು, ಉಪಪ್ರಾಚಾರ್ಯರಾದ ಡಾ. ಸಂದೀಪ ಜವಳಿ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ಭಾವಚಿತ್ರದಲ್ಲಿ: ವಿಜೇತರಾದ ಸ್ಪರ್ಧಾಳುಗಳೊಂದಿಗೆ ಪ್ರಾಚಾರ್ಯರು, ಆಜೀವ ಸದಸ್ಯರು ಹಾಗೂ ಉಪಪ್ರಾಚಾರ್ಯರು ಉಪಸ್ಥಿತರಿದ್ದಾರೆ