Belagavi News In Kannada | News Belgaum

“ದಿವ್ಯಕಾಶಿ ಭವ್ಯಕಾಶಿ” ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿಜೆಪಿ ವತಿಯಿಂದ ಬೆಳಗಾವಿಯ ಎಲ್ಲ ಶಿವಾಲಯಗಳಲ್ಲಿ ಪೂಜೆ

ಬೆಳಗಾವಿ,: ದಿನಾಂಕ 13-12-2021 ರಂದು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರುಉದ್ಘಾಟನೆ ಮಾಡಲಿರುವ ಕಾಶಿ (ವಾರಣಾಸಿ) ಧಾಮಅಭಿವೃದ್ಧಿಯೋಜನೆಯ ಅಂಗವಾಗಿ ದಿವ್ಯಕಾಶಿ ಭವ್ಯಕಾಶಿ ಎಂಬ ಶೀರ್ಷಿಕೆಯ ಅಡಿಯಲ್ಲಿ ಶಾಸಕ ಅನಿಲ ಬೆನಕೆ ಹಾಗೂ ಬಿಜೆಪಿ ಕಾರ್ಯಕರ್ತರು ನಗರದಎಲ್ಲ ಶಿವಾಲಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಲೋಕ ಕಲ್ಯಾಣಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸಲಾಯಿತು.

ರಾಮತೀರ್ಥ ನಗರದ ವೀರಭದ್ರೇಶ್ವರದೇವಸ್ಥಾನದಿಂದ ದಿವ್ಯಕಾಶಿ ಭವ್ಯಕಾಶಿ ಎಂಬ ಶೀರ್ಷಿಕೆಯ ಅಡಿಯಲ್ಲಿ ಶಾಸಕ ಅನಿಲ ಬೆನಕೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಉತ್ತರ ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಈರಯ್ಯಾಖೋತ, ನಗರಸೇವಕರಾದ ಹನಮಂತ ಕೊಂಗಾಲಿ, ಮಹಾಶಕ್ತಿಕೇಂದ್ರ ಪ್ರಮುಖರಾದಚಂದ್ರಶೇಖರದೇಸಾಯಿ, ಮಂಜುನಾಥ ಭಜಂತ್ರಿ, ಮಹಾಂತೇಶ ವಕ್ಕುಂದ, ಅಣ್ಣಾಸಾಹೇಬ ದೇಸಾಯಿ ಹಾಗೂ ವೀರಭದ್ರೇಶ್ವರದೇವಸ್ಥಾನಕಮಿಟಿ ಸದಸ್ಯರು ಉಪಸ್ಥಿತರಿದ್ದರು.