Belagavi News In Kannada | News Belgaum

ನಷಿಸಿ ಹೋಗುತ್ತಿರುವ ಗ್ರಾಮೀಣ ಸೊಗಡಿನ ಭಜನಾಪದಗಳು ಉಳಿಸಲು ಪ್ರಯತ್ನಿಸಿ ಬಸವರಾಜ ಭದ್ರಗೋಳ!

ಹುಣಸಗಿ ಸಮೀಪದ ಕೊಡೇಕಲ್ ಪಟ್ಟಣದ ಡಕ್ಕಲಿಗರ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬನದೊಡ್ಡಿಯ ಶ್ರೀ ಮಾರುತೇಶ್ವರ ಭಜನಾ ಮಂಡಳಿ ಕಲಾವಿದರು ನಾನಾ ಮಾದರಿ ಭಜನೆಗಳನ್ನು ಹಾಡಿ ಗಮನ ಸೆಳೆದರು.
ವರದಿ ಸಿದ್ದನಗೌಡ ಬಿರಾದಾರ ಹುಣಸಗಿ: ಸಮೀಪದ ಕೊಡೇಕಲ್‍ನಲ್ಲಿ ಗಮನ ಸೆಳೆದ ಬನದೊಡ್ಡಿಯ ಶ್ರೀ ಮಾರುತೇಶ್ವರ ಭಜನಾ ಮಂಡಳಿ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜೀವಂತಿಕೆಯಿಂದ ಕೂಡಿದ್ದು ನಾಡಿನ ಜಾನಪದ ಸೊಗಡನ್ನು ವೈಭವಿಕರಿಸುತ್ತಿರುವುದು ಶ್ಲಾಘನೀಯ ಎಂದು ಜಾನಪದ ಪರಿಷತ್ತು ಹುಣಸಗಿ ತಾಲೂಕು ಅಧ್ಯಕ್ಷ ಬಸವರಾಜ ಭದ್ರಗೋಳ ಹೇಳಿದರು.
ಪಟ್ಟಣದ ಡಕ್ಕಲಿಗರ ಬಡಾವಣೆಯಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶರವೇಗದಲ್ಲಿ ಬೆಳೆಯುತ್ತಿರುವ ಇಂದಿನ ಹೈಟೆಕ್ ಯುಗದಲ್ಲಿ ಜಾನಪದ ನಶಿಸುತ್ತಿದೆ, ಕಲಾವಿದರೂ ಕೂಡ ಎಲೆಮರೆ ಕಾಯಿಯಂತೆ ದೂರವಾಗುತ್ತಿದ್ದಾರೆ, ಇಂತ ಪರಿಸ್ಥಿತಿಯಲ್ಲಿಯೂ ಕೂಡ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಜನೆ, ಬಯಲಾಟ, ನಾಟಕ, ಡೊಳ್ಳು, ಹಂತಿಪದ, ಸೋಬಾನ ಪದ ಸೇರಿ ನಾನಾ ಹಂತದ ಸಾಕಷ್ಟು ಕಲಾವಿದರು ತಮ್ಮ ಕಲೆಯನ್ನು ಮುಂದುವರೆಸಿದ್ದು ಸಮಂಜಸ ಕಾರ್ಯ, ಜಾನಪದ ಪರಿಷತ್ತಿನ ಮೂಲಕ ಅನೇಕ ಕಲಾವಿದರನ್ನು ಗುರುತಿಸಿ ವೇದಿಕೆಗಳನ್ನು ಆಯೋಜಿಸುವುದರ ಮೂಲಕ ಕಲಾವಿದರಿಗೆ ಪ್ರೋತ್ಸಾಯಿಸಲಾಗುವುದು ಎಂದರು.
ಗಮನ ಸೆಳೆದ ಬನದೊಡ್ಡಿಯ ಭಜನೆ : ಬನದೊಡ್ಡಿ (ಕಕ್ಕೇರಾ) ಯ ಶ್ರೀ ಮಾರುತೇಶ್ವರ ಭಜನಾ ಮಂಡಳಿ, ಕೊಟೇಗುಡ್ಡದ ಅಕ್ಕನ ಬಳಗದ ಸದಸ್ಯರು ನಾನಾ ಮಾದರಿಯ ಜಾನಪದ ಭಜನೆ ಹಾಗೂ ಗೀತೆಗಳನ್ನು ಹಾಡಿದ್ದು ವಿಶೇಷ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರಷ್ಕøತ ಹಿರಿಯ ಕಲಾವಿದ ಶಿವಪ್ಪ ಹೆಬ್ಬಾಳ, ಒಕ್ಕೂಟದ ತಾಲೂಕು ಅಧ್ಯಕ್ಷ ಸಂಗಪ್ಪ ಹೆಬ್ಬಾಳ, ಸಹ-ಕಾರ್ಯದರ್ಶಿ ಚಂದ್ರಪ್ಪ ಕಟ್ಟಿಮನಿ, ಬನದೊಡ್ಡಿಯ ಶ್ರೀ ಮಾರುತಿ ಭಜನಾ ಮಂಡಳಿಯ ಗುಡದಪ್ಪ ಹನೀಫ್, ಹಣಮಂತ, ಪರಮಣ್ಣ, ಚಿದಾನಂದ, ಅಂಬ್ರಪ್ಪ ಗುಡಗುಂಟಿ, ಹಣಮಂತ ಪೈದೊಡ್ಡಿ, ಮಲ್ಲಪ್ಪ ಹನೀಫ್, ದೇವಮ್ಮ, ಹಳ್ಳೆಮ್ಮ, ಯಲ್ಲಮ್ಮ, ನಾಗಮ್ಮ, ಪರಮವ್ವ, ಹಣಮಂತಿ ಸೇರಿ ಕೊಟೇಗುಡ್ಡ, ಕೊಡೇಕಲ್ ಗ್ರಾಮಗಳ ನಾನಾ ಮಾದರಿಯ ಕಲಾವಿದರು, ಅಕ್ಕನ ಬಳಗದ ಸದಸ್ಯರು ಇದ್ದರು.