Belagavi News In Kannada | News Belgaum

ಸೇವಾ ಭದ್ರತೆ ವೇತನ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಅಥಣಿ ಅತಿಥಿ ಉಪನ್ಯಾಸಕರಿಂದ ತರಗತಿ ಬಹಿಷ್ಕಾರ

ಅಥಣಿ :ಅಥಣಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸೇವಾ ಭದ್ರತೆ  ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ದಿನಾಂಕ  ೧೦ ರಿಂದ ಅನಿರ್ದಿಷ್ಟ ಅವಧಿಗೆ ತರಗತಿ ಬಹಿಷ್ಕಾರ ಮಾಡಿ ಪ್ರಭಾರ ಪ್ರಾಂಶುಪಾಲ ಡಾ  ಬಿ ಆಯ್ ಮಠಪತಿಯವರಿ ಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಪ್ರೋ ಆರ್ ಎ ಬಡಿಗೇರ  ಅವರು ಕಳೆದ ೨೦ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ಸರಕಾರ ನಿಕೃಷ್ಟವಾಗಿ ನೋಡುತ್ತಿದೆ ಒಬ್ಬ ಕೂಲಿಯವನಿಗಿಂತಲೂ ಕನಿಷ್ಠವಾಗಿ ನಮ್ಮನ್ನ ಕಾಣುತ್ತಿದೆ ಹಾಗಾಗಿ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ನಾವು ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಅವಧಿಗೆ ಮುಷ್ಕರ ಮಾಡುತ್ತಿದ್ದೇವೆ ಶಿಘ್ರವಾಗಿ ಸರ್ಕಾರ ನಮಗೆ ಸೇವಾ ಭದ್ರತೆ ನೀಡಲಿ ಎಂದು ಹೇಳಿದರು .
 ಈ ಸಂದರ್ಭದಲ್ಲಿ ಮಾತನಾಡಿದ ಡಿ ಎಸ್ ಸಾವಂತ ರಾಜ್ಯಶಾಸ್ತ್ರ ಅತಿಥಿ ಉಪನ್ಯಾಸಕರು ಮಾತನಾಡುತ್ತಾ ಇದೊಂದು ಕಣ್ಣು-ಕಿವಿ ಇಲ್ಲದ ಸರ್ಕಾರ ಹಾಗೂ ಹೃದಯಹೀನ ಸರ್ಕಾರ ನಮ್ಮನ್ನ ಕೂಲಿಯಾಳುಗಳಿಗಿಂತ ನಿಕೃಷ್ಟವಾಗಿ ಕಾಣುತ್ತಿದೆ ಸ್ನಾತಕೋತ್ತರ ಪದವಿದರರಾಗಿ ಕಡಿಮೆ ವೇತನದಲ್ಲಿ ಅಂದರೆ ೧೧೦೦೦ ಮತ್ತು ೧೩೦೦೦ ಸಾವಿರ  ವೇತನದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿಯಿದೆ. ಸರ್ಕಾರ ನ್ಯಾಯ ಒದಗಿಸುವ ದೃಷ್ಟಿಯಿಂದ ಕಷ್ಟದ  ಪರಿಸ್ಥಿತಿಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ವಿವಿಧ ರಾಜ್ಯಗಳಲ್ಲಿ ಸೇವಾ ಭದ್ರತೆ ನೀಡಿದಂತೆ ನಮಗೆ ಸೇವಾ ಭದ್ರತೆ ನೀಡಿ ೧೨ ತಿಂಗಳು ವೇತನ ನೀಡುವ ಮೂಲಕ ನಮ್ಮ ಭವಿಷ್ಯಕ್ಕೊಂದು ಆಧಾರ ಕಲ್ಪಿಸಬೇಕೆಂದು ಈ ಮೂಲಕ ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದು ಹೇಳಿದರು .
ಈ ವೇಳೆ ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲರಾದ ಡಾ ಬಿ ಐ  ಮಠಪತಿ ಅವರು ಅತಿಥಿ ಉಪನ್ಯಾಸಕರಿಂದ ಮನವಿಯನ್ನು ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಮುಟ್ಟಿಸುವುದಾಗಿ ಹೇಳಿದರು
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಪ್ರೊ ಎಸ್ಎಸ್ ದೇವರೆಡ್ಡಿ  ಡಾ ಎಂ ಎ ಚನ್ನಾಪುರ ಡಾ ಎಸ್ ಎಸ್ ಕಲ್ಲೋಳಿಕರ ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ ಡಾ ಸುಭಾಷ ಕಾಂಬ್ಳೆ ಪ್ರೋ ಬಿ ಕೆ ಪಾಟೀಲ್ ಪ್ರೊ ಪ್ರವೀಣ ತುಬಚಿ ಎ ಜಿ ಮಾದರ ಪ್ರೊ ಎಂ ಬಿ ಪಾಟೀಲ್ ರಮೇಶ್ ಸಕ್ರಿ ಡಾ ವಿಜಯ್ ಕಾಂಬ್ಳೆ ಪ್ರೊ ಮಹೇಂದ್ರ ಸುತಾರ್ ಪ್ರೊ ಆರ್ ಎಸ್ ಅಂಬಿ ಡಾ  ರಾಜೇಂದ್ರ ಗೊಂಧಳೆ,ಡಾ ಎಂ ಎಸ್ ಉಕ್ಕಲಿ , ಪ್ರೊ ಆರ್ ಎಸ್ ಗೌರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು