Belagavi News In Kannada | News Belgaum

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ನಾನಾ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಹುಕ್ಕೇರಿ : ತಾಲೂಕಿನ ವಿವಿಧ ಗ್ರಾಮಗಳಿಗೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ನಾನಾ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಬಡಕುಂದ್ರಿ, ಹೊಸೂರ, ಹಂಚಿನಾಳ, ಕುರಣಿವಾಡಿ, ಉ-ಖಾನಾಪೂರ ಮತ್ತು ಹರಗಾಪೂರ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ವೀಕ್ಷಿಸಿದರು.

ಯರನಾಳದ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಹೊಸ ಕೆರೆ ನಿರ್ಮಾಣ, ಕುರಣಿವಾಡಿ ಗ್ರಾಮದಲ್ಲಿ ಶಾಲೆಯ ಆವರಣದಲ್ಲಿ ಪೇವರ್ಸ ಕಾಮಗಾರಿ ಮತ್ತು ಹೈಟೆಕ್ ಶೌಚಾಲಯ ಹಾಗೂ ಅಕ್ಷರ ದಾಸೋಹದ ಅನ್ನ ಮತ್ತು ಸಾಂಬಾರ ಪರಿಸೀಲಿಸಿದರು.

ನಂತರ ಹಂಚಿನಾಳ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪೇವರ್ಸ್, ಶೌಚಾಲಯ ಮತ್ತು ಬೋಜನಾಲಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಉ-ಖಾನಾಪೂರ ಪ್ರೌಢ ಶಾಲೆಯಲ್ಲಿ ಪೇವರ್ಸ, ಶಾಲಾ ಕೌಂಪೌಂಡ, ಗ್ರಂಥಾಲಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ನಂತರ ಹರಗಾಪೂರ ಗ್ರಾಮದ ಗಾಯರಾಣದಲ್ಲಿ ಅರಣ್ಯೀಕರಣ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಡಕುಂದ್ರಿ ಮತ್ತು ಹಂಚಿನಾಳದಲ್ಲಿ ಒಎಚ್‍ಟಿ ಟ್ಯಾಂಕ್ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ನಂತರ ಹರಗಾಪೂರ ಗ್ರಾಮದಲ್ಲಿ ಇರುವ ಬಹುಗ್ರಾಮ ಕುಡಿಯುವ ನೀರಿನ ಸಂಪನ್ನು ವೀಕ್ಷಣೆ ಮಾಡಿದರು.

ಜಿಪಂ ಸಿಇಒ ದರ್ಶನ ಎಚ್.ವಿ., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಆನಂದ ಬನಗಾರ, ಸಹಾಯಕ ಕಾರ್ಯಕಾರಿ ಅಭಿಯಂತರ ವಿಜಯ ಮಿಶ್ರಿಕೋಟಿ, ಖಾತರಿ ಯೋಜನೆ ಸಹಾಯಕ ನಿರ್ದೇಶಕ ಪಿ.ಲಕ್ಷ್ಮೀನಾರಾಯಣ, ಅಭಿಯಂತರರಾದ ಎಸ್.ಡಿ.ಕಾಂಬಳೆ, ಶಶಿಧರ ಭೂಸಗೋಳ, ಐಇಸಿ ಸಂಯೋಜಕ ಮಹಾಂತೇಶ ಬಾದವನಮಠ ಮತ್ತಿತರರು ಉಪಸ್ಥಿರಿದ್ದರು.