Belagavi News In Kannada | News Belgaum

ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ.

ಬೆಂಗಳೂರು: ನಟಿ, ಶಾಸಕಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷವುಂಟಾಗಿದ್ದು,  ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ.

 

ರೋಜಾ ರಾಜಮಂಡ್ರಿಯಿಂದ ತಿರುಪತಿಗೆ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿ ಒಟ್ಟು ೭೦ ಮಂದಿ ಪ್ರಯಾಣಿಕರಿದ್ದು. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ವಿಮಾನವನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎಂದು ನಟಿ ರೋಜಾ ವಿಡಿಯೋ ಹಂಚಿಕೊಂಡಿದ್ದಾರೆ.

 

ಲ್ಯಾಂಡಿಂಗ್ ಆದರೂ ಕೆಲ ಸಮಯದವರೆಗೆ ವಿಮಾನದ ಬಾಗಿಲು ಕೂಡ ತೆರೆದಿರಲಿಲ್ಲ. ನಂತರ ಸೂಕ್ತ ಅನುಮತಿ ಸಿಕ್ಕ ಬಳಿಕ ವಿಮಾನದ ಬಾಗಿಲು ತೆರೆಯಲಾಗಿದೆ . ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ವಿವರಿಸಿದ್ದಾರೆ. ಸಧ್ಯ ನಟಿ ರೋಜಾ ರಸ್ತೆ ಮಾರ್ಗವಾಗಿ ತಿರುಪತಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.