Belagavi News In Kannada | News Belgaum

ಎಂಇಎಸ್ ಪುಂಡರಿಗೆ ಮಸಿ ಬಳಿದ, ಕನ್ನಡ ಪರ ಕಾರ್ಯಕರ್ತ: ಕೊಲೆ ಕೇಸ್ ವಾಪಸ್ ಪಡೆಯುವಂತೆ ಕರವೇ ಪ್ರತಿಭಟನೆ

ಘಟಪ್ರಭಾ:   ಶಿವಸೇನೆಯ ಪುಂಡರು ಕನ್ನಡ ದ್ವಜ ಸುಟ್ಟ ಹಾಕಿದ್ದು, ಮೇಳಕ್ಕೆ  ವಿರೋಧಿಸಿದ ಕನ್ನಡ ಪರ ಕಾರ್ಯಕರ್ತರ ಮೇಲೆ ಬೆಳಗಾವಿ ಪೋಲಿಸರು ಕೊಲೆ ಯತ್ನ ಕೇಸ್ ಹಾಕಿರುವುದನ್ನು ಖಂಡಿಸಿ  ಗೋಕಾಕ ಕ.ರ.ವೇದಿಕೆಯಿಂದ ತೀವ್ರ  ಆಕ್ರೋಶ ಹೊರಹಾಕಿದ್ದಾರೆ.

ಇಲ್ಲಿನ  ಮೃತ್ಯುಂಜಯ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು ಟಯರಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.  ರಾಜ್ಯದ ನೆಲದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳು ಕನ್ನಡ ಸಂಘಟನೆ ಕಾರ್ಯಕರ್ತರ ಮೇಲೆ ಕೊಲೆ ಯತ್ನ ಕೇಸ್ ವಾಪಸ್ ಪಡೆಯಬೇಕು.   ಎಮ್ ಇ ಎಸ್ ವಿರುದ್ಧ ರತಿಭಟನಾಕಾರರನ್ನು  ಘೋಷಣೆ ಕೂಗಿದರು.

ಕ.ಜಿಲ್ಲಾ ಸಂಚಾಲಕ ರೆಹಮಾನ್ ಮೊಕಾಶಿ ಮಾತನಾಡಿ,  ಎಮ್ ಇ ಎಸ್ ಮುಖಂಡನಿಗೆ ಮಸಿ ಬಳಿದ ಕನ್ನಡ ಹೋರಾಟಗಾರರ   ಮೇಲೆ ಹಾಕಿದ ಮೊಕದ್ದಮೆ ವಾಪಸ್ ಪಡೆದುಕೊಳ್ಳಬೇಕು ಹಾಗೂ ಕೊಲ್ಲಾಪುರದಲ್ಲಿ ಕನ್ನಡ ದ್ವಜ ಸುಟ್ಟ ಕೀಡಿಗೆಡಿಗಳ ಮೇರೆದವರ  ಮೇಲೆ ಸರ್ಕಾರ ಸೂಕ್ತ ಕ್ರಮಜರುಗಿಸಬೇಕು.  ವಿಳಂಬವಾದರೆ, ಕರವೇ ರಾಜ್ಯಾದ್ಯಕ್ಷ ಶಿವರಾಮೇಗೌಡರು ಹಾಗೂ ಜಿಲ್ಲಾ ಅದ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ಈ ಸಂದರ್ಭದಲ್ಲಿ  ರವಿ ನಾವಿ ಅರ್ಜುನ ಗಂಡವಗೋಳ,  ಸುನೀಲ್ ಕೊಟಬಾಗಿ,   ಸಂತೋಷ ದೊಡಮನಿ,  ರಾಜು ಮುತ್ತೆನ್ನವರ,  ಸಿದ್ದು ಹಣಬರಟ್ಟಿ,  ಸುನೀಲ್ ಬೆಳಮರಡಿ,  ಇಸ್ಮಾಯಿಲ್ ಬಳಿಗಾರ , ಅಮೃತ ಝರಳಿ,  ಸಿದ್ದು ಕುರಣಿ ,  ಶೀವು ಕುರಣಿ , ಸೋಹಿಲ್ ಮೊಕಾಶಿ, ದೀಲಿಪ್ ಗಾಡಿವಡ್ಡರ,  ವಸಂತ ತಳಗೇರಿ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.//////