Belagavi News In Kannada | News Belgaum

ಕಾಂಗ್ರೆಸ್ , ಬಿಜೆಪಿ ರೆಸಾರ್ಟ್ ರಾಜಕೀಯದಿಂದ ಫಲಿತಾಂಶ ಬುಡಮೇಲಾಗಿದೆ: ಎಂಎಲ್ ಸಿ ಲಖನ್ ಜಾರಕಿಹೊಳಿ

ಗೋಕಾಕ: ಪಕ್ಷೇತರ ಅಭ್ಯರ್ಥಿ ಗೆಲುವಿಗೆ  ಗ್ರಾಪಂ ಸದಸ್ಯರು ಬೆಂಬಲ ಸೂಚಿಸಿ, ಮತ ನೀಡಿದ್ದಾರೆ. ಅವರ ಸಹಕಾರ ಸದಾ ಹೀಗೆ  ಇರಲಿ. ಈ ಭಾಗದ ಅಭಿವೃದ್ಧಿಗೆ ಆದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಎಂಎಲ್ ಸಿ ಲಖನ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು,  ಗುಪ್ತ ಮಿಟಿಂಗ್ ನಿಂದ ಬಿಜೆಪಿ ಮತ ಕಾಂಗ್ರೆಸ್ ಗೆ ವಾಲಿವೆ ಹೊರತು ಪಕ್ಷೇತರ ಅಭ್ಯರ್ಥಿಗಲ್ಲ.  ಒಂದು ವೇಳೆ ಹಾಗೇನಾದರೂ  ಆಗಿದರೆ, ಹೆಚ್ಚು ಮತಗಳು ಬಿಜೆಪಿ ಹಾಗೂ  ಪಕ್ಷೇತರ ಅಭ್ಯರ್ಥಿಗೆ  ಮತದಾರರು ಮಣೆ ಹಾಕಬೇಕಿತ್ತು ಎಂದರು.

ಜಿಲ್ಲೆಯ ಕಾಂಗ್ರೆಸ್  ನಾಯಕರು ಹಾಗೂ ಬಿಜೆಪಿಯವರ ರೇಸಾರ್ಟ್ ರಾಜಕೀಯದಿಂದ  ಹೀಗಾಗಿದೆ.  ಅತೀ ಹೆಚ್ಚು ಮತಗಳು ಬಿಜೆಪಿಯಲ್ಲಿವೇ ,  ಕಾಂಗ್ರೆಸ್ ನಲ್ಲಿ ಕೇವಲ 2500 ಸಾವಿರ ಮತಗಳಿವೆ,  ಇವರೊಳಗಿನ  ಮಿಟಿಂಗ್ ನಿಂದ  ಫಲಿತಾಂಶ ಬುಡಮೇಲಾಗಿದೆ. ಇದನ್ನು ಇನ್ನೊಬ್ಬರ ಮೇಲೆ ಆಪಾದನೆ ಮಾಡುವುದು ತಪ್ಪು ಎಂದು..? ಸಹೋದರ ರಮೇಶ ಜಾರಕಿಹೊಳಿ ಪರ  ಎಂಎಲ್ ಸಿ ಲಖನ್  ಜಾರಕಿಗೊಳಿ ಅವರು  ಬ್ಯಾಟಿಂಗ್ ಬಿಸಿದ್ದಾರೆ.

ಬಿಜೆಪಿ ಸೇರ್ಪಡೆ ವಿಚಾರವಾಗಿ ನಮ್ಮ ನಾಯಕರ  ಜತೆ ಒಂದು ಸುತ್ತಿನ ಮಾತುಕತೆ ಮಾಡುತ್ತೆನೆ ಎಂದ ಅವರು, ಬಾಲಚಂದ್ರ ಜಾರಕಿಗೊಳಿ ಹಾಗೂ ರಮೇಶ ಜಾರಕಿಹೊಳಿ ಸಹೋದರಬ್ಬಿರು  ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಬೆಂಬಲ ನೀಡಿದರೆ ಮೊದಲ ಪ್ರಾಶಸ್ಯ್ತದಲ್ಲಿ ಗೆಲ್ಲುವು ಸಾಧಿಸುತ್ತಿದ್ದೆ ಎಂದರು./////