Belagavi News In Kannada | News Belgaum

ಶಾಸಕ ರಮೇಶ್ ಜಾರಕಿಹೊಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಳಗಾವಿ:  ಸಿದ್ದರಾಮಯ್ಯ ವೇಸ್ಟ್ ಬಾಡಿ ಎಂದು ಹೇಳಿಕೆ ನೀಡಿದ ಶಾಸಕ ರಮೇಶ್ ಜಾರಕಿಹೊಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿದ್ದರಾಮಯ್ಯ, ನಾನು ರಾಜಕೀಯಕ್ಕೆ ಬಂದು 40 ವರ್ಷವಾಯಿತು. ನಾನು ಇಂತವರನ್ನ ಬಹಳ ಜನರನ್ನ ನೋಡಿದ್ದೇನೆ.  ರಮೇಶ್ ಜಾರಕಿಹೊಳಿಗೆ ರಾಜಕೀಯ ಭಾಷೆ, ಸಂಸ್ಕೃತಿ ಇಲ್ಲ.  ಒಂದು ಕಡೆ ಗುರು ಅಂತಾರೆ. ಇನ್ನೊಂದು ಕಡೆ ಹೀಗೆ.  ಅದಕ್ಕೆ ಏನು ಬೆಲೆ ಇರುತ್ತದೆ ಎಂದು ಪ್ರಶ್ನಿಸಿದರು.
ಇಂತವರನ್ನ ಬಹಳಷ್ಟು ಜನರನ್ನ ನೋಡಿದ್ದೇನೆ. ಸಿದ್ದರಾಮಯ್ಯ ಏನು ಅಂತಾ ರಾಜ್ಯಕ್ಕೆ ಗೊತ್ತು,  ವೇಸ್ಟ್ ಬಾಡಿ ಯಾರು ಎಂದು ಎಲ್ಲರಿಗೂ ಗೊತ್ತು ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು./////