Belagavi News In Kannada | News Belgaum

ಮಾಲಾಧಾರಿಗಳಿಗೆ ಹನುಮಪ್ಪನ ಶಕ್ತಿ ಹಾಗೂ ಭಕ್ತಿ ಸಿಗಲಿ: ಜಯಪಾಲ ನಾಗನೂರ”

“ಮಾಲಾಧಾರಿಗಳಿಗೆ ಹನುಮಪ್ಪನ ಶಕ್ತಿ ಹಾಗೂ ಭಕ್ತಿ ಸಿಗಲಿ: ಜಯಪಾಲ ನಾಗನೂರ”

ಹಾರೂಗೇರಿ: ಸ್ಥಳೀಯ ಹಾರೂಗೇರಿ ಪಟ್ಟಣದ ಹನುಮಾನ ಭಕ್ತರು ಇಪ್ಪತೊಂದು ದಿನ, ಹದಿನೆಂಟು ದಿನ ಹಾಗೂ ಹನ್ನೊಂದು ದಿನಗಳು ಹೀಗೆ ಹನುಮ ಮಾಲೆ ಧರಿಸಿ ಹನುಮಾನ ದೇವರಿಗೆ ಅರ್ಚಕರೂ ಹಾಗೂ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಜಿಲ್ಲಾಧ್ಯಕ್ಷರಾದ ಸಂಜಯ ಗುರವ ಅವರು ಇಂದು ಹನುಮ ದೇವರಿಗೆ ಪೂಜೆ ಸಲ್ಲಿಸಿ ಕಿಸ್ಕಿಂಧಾ ಯಾತ್ರೆಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಹನುಮ ಮಾಲಾಧಾರಿಗಳು ಹಾಗೂ ಹಿರಿಯರೂ ಆದ ಸುನೀಲ ಕಬ್ಬೂರ, ದುಂಡಪ್ಪ ಶಿರಹಟ್ಟಿ ಹಾಗೂ ಜಯಪಾಲ ನಾಗನೂರ ಮಾತನಾಡಿ ಹನುಮ ದೇವರನ್ನು ನಂಬಿದರೆ ಸಾಕು ಯಾವುದೇ ಭಯ ಬಾರದು. ಜೀವನದಲ್ಲಿ ಯಾವತ್ತೂ ಹನುಮನ ಭಕ್ತರಿಗೆ ಹನುಮನಂತೆ ಶಕ್ತಿ ಹಾಗೂ ಭಕ್ತಿ ಸಿಗಲಿ ಎಂದು ಹೇಳಿದರು.

ಹನುಮ ಮಾಲಾಧಾರಿಗಳಾದ ಪ್ರಥ್ವಿ ಶಹಾ, ಹನಂಮತ ಮನ್ಸೂರೆ, ಹಣಮಂತ ಹೊನಗೌಡರ, ರವಿ ಕಲಾಲ, ಶಂಕರ ಕೆಳಗಡೆ, ಆಕಾಶ ಬಡಿಗೇರ, ಅಜೀತ ಆಸಂಗಿ, ಬಸವರಾಜ ಬಿದರಿ, ಓಂಕಾರ ಶಹಾ, ಆನಂದ ಸರಿಕರ ಉಪಸ್ಥಿತರಿದ್ದರು.