Belagavi News In Kannada | News Belgaum

ಆತ ಸಿ.ಟಿ. ರವಿ ಅಲ್ಲ, ಲೂಟಿ ರವಿ ಎಂದ ಡಿಕೆಶಿ

ಬೆಳಗಾವಿ : ಭ್ರಷ್ಟಾಚಾರ ಜನಕ ಕಾಂಗ್ರೆಸ್​ ಎಂಬ ಸಿ.ಟಿ. ರವಿ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಆತ ಸಿ.ಟಿ. ರವಿ ಒಬ್ಬ ಲೂಟಿ ರವಿ ಎಂದು ಗುಡುಗಿದ್ದಾರೆ. ನನ್ನ ಮೇಲೆ ಆರೋಪ ಮಾಡಲು ನಿನ್ನೆಗೂ ಹಕ್ಕಿದೇ ಎಂದು ಪ್ರಶ್ನಿಸಿದ್ದಾರೆ. ಈ ಲೂಟಿ ರವಿ ನನ್ನ ವಿರುದ್ಧ ಮಾತನಾಡಿ

ದೊಡ್ಡ ಲೀಡರ್​ ಆಗಬೇಕು ಎಂದುಕೊಂಡಿದ್ದಾರೆ. ಈ ಸಿ.ಟಿ. ರವಿ ಲೂಟಿ ರವಿ ಹೇಗಿದ್ದ ಅನ್ನೋದನ್ನು ಮೊದಲು ಹೇಳಲಿ ಎಂದು ಕಿಡಿಕಾರಿದ್ದಾರೆ. ಚಳಿಗಾಲ

ಅಧಿವೇಶನಕ್ಕೂ ಮುನ್ನ ಬೆಳಗಾವಿಯ ಸುವರ್ಣ ಸೌಧದ ಎದುರು ಕಾಂಗ್ರೆಸ್​ ಹೈಡ್ರಾಮಾವನ್ನೇ ನಡೆಸಿದೆ. ಪರ್ಸೆಂಟೇಜ್​ ಸರ್ಕಾರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್​ ನಾಯಕರು ಟ್ರ್ಯಾಕ್ಟರ್​ ರ್ಯಾಲಿ ನಡೆಸುವ ಮೂಲಕ ಆಕ್ರೋಶ ಹೊರಹಾಕಿದರು.////