Belagavi News In Kannada | News Belgaum

ಮೈಸೂರು ಅರಮನೆ ಆನೆಗಳು ಗುಜರಾತ್‌ಗೆ ಶಿಫ್ಟ್‌

ಮೈಸೂರು: ಇಲ್ಲಿನ ಅರಮನೆ ಆನೆಗಳು ಗುಜರಾತ್‌ಗೆ ಶಿಪ್ಟ್‌ ಆಗಿವೆ. ಆನೆಗಳ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಗುಜರಾತ್‌ಗೆ ರವಾನಿಸಲಾಗಿದೆ.
ರಾಜವಂಶಸ್ಥರಿಗೆ ಸೇರಿದ ಈ ಆನೆಗಳ ನಿರ್ವಹಣೆ ಕಷ್ಟವಾಗಿತ್ತು. ಪ್ರತಿ ತಿಂಗಳು ಆನೆಗಳ ನಿರ್ವಹಣೆಗೆ ಲಕ್ಷ ಲಕ್ಷ ಖರ್ಚಾಗುತ್ತಿತ್ತು. ಹೀಗಾಗಿ ಗುಜರಾತ್‌ನ

ಆನೆಗಳ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. ಆನೆ ವೈದ್ಯರಿಂದ ತಪಾಸಣೆ ನಡೆಸಿದ್ದ ಅರಣ್ಯ ಇಲಾಖೆಯು ತಪಾಸಣೆ ಬಳಿಕ ಆನೆಗಳನ್ನು ಕಳುಹಿಸಿತು.

ಮೂರು ದಿನಗಳ ಕಾಲ ಪ್ರಯಾಣ ಮಾಡಲಿದ್ದು, ಆನೆಗಳು ಮೂರು ದಿನದ ಬಳಿಕ ಗುಜರಾತ್ ತಲುಪಲಿವೆ. ದೊಡ್ಡ ಟ್ರಕ್ ಮೂಲಕ ಗುಜರಾತ್‌ಗೆ ಆನೆಗಳನ್ನು ರವಾನಿಸಲಾಗಿದೆ./////