Belagavi News In Kannada | News Belgaum

ಕರ್ನಾಟಕ ಕ್ಷತ್ರಿಯ ಮರಾಠಾ ಫೆಡರೇಶನ ರಾಜ್ಯಾಧ್ಯಕ್ಷ ಶಾಮಸುಂದರ ಗಾಯಕವಾಡ ಇವತ್ತು ಸರ್ಕಾರಕ್ಕೆ ಖಡಕ ಎಚ್ಚರಿಕೆ

ಬೆಳಗಾವಿ ವರದಿ

ಹಲವಾರು ವರ್ಷಗಳಿಂದ ಮರಾಠಾ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಿ ಕೊಡ್ತೀವಿ ಹಾಗೂ ಕೆಲವು ಬೇಡಿಕೆಗಳನ್ನು ಪೂರ್ಣಗೊಳಿಸ್ತೀವಿ ಅಂತಾ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದ ಸರ್ಕಾರದ ವಿರುದ್ಧ ಇವತ್ತು ಕರ್ನಾಟಕ ಕ್ಷತ್ರಿಯ ಮರಾಠಾ ಫೆಡರೇಶನ ರಾಜ್ಯಧ್ಯಕ್ಷ ಶಾಮಸುಂದರ್ ಗಾಯಕವಾಡ ಅವರ ನೇತೃತ್ವದಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಿಂದ ಮರಾಠಾ ಬಾಂಧವರು ಬೆಳಗಾವಿ ವಿಧಾನ ಸೌಧದ ಹೊರಗೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೂ ಸರ್ಕಾರ ನಮಗೆ ನಮ್ಮ ಹಕ್ಕು ನಮಗೆ ನೀಡಲಿಲ್ಲಾ ಅಂದ್ರೆ ಬರುವ ಕೆಲವೆ ದಿನಗಳಲ್ಲಿ ಉಗ್ರ ವಾದ ಹೋರಾಟ ಮಾಡುವುದರ ಜೊತೆಗೆ ರಾಜ್ಯಾದ್ಯಂತ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಮರಾಠಾ ಸಮಾಜದ ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಕರ್ನಾಟಕ ಕ್ಷತ್ರಿಯ ಮರಾಠಾ ಫೆಡರೇಶನ ರಾಜ್ಯಾಧ್ಯಕ್ಷ ಶಾಮಸುಂದರ ಗಾಯಕವಾಡ ಇವತ್ತು ಸರ್ಕಾರಕ್ಕೆ ಖಡಕ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ರಾದ ಶಾಮಸುಂದರ ಗಾಯಕವಾಡ , ಸುಮಾಜದ ಹಿರಿಯ ಮುಖಂಡರಾದ ಸುಮಿತ್ರಾ ಉಗಳೆ , ಸೆಕ್ರೆಟರಿ ವಿಠಲ ವಾಘಮೊಡೇ , ಮರಾಠಾ ಸಮಾಜದ ಯುವ ನಾಯಕ ವಿನಾಯಕ ಭೋಸಲೇ , ಮಾಜಿ ಶಾಸಕ ಅರವಿಂದ ಪಾಟೀಲ , ಜಯರಾಮ ಮಿರಜಕರ , ಸುಭಾಶ ಕಾಸಾರಕರ , ಧಾರವಾಡ ಜಿಲ್ಲಾ ಅಧ್ಯಕ್ಷ ಪ್ರಕಾಶ ಟಿಕಪ್ಪನವರ , ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಡಿ ಘೋರ್ಪಡೆ , ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿಬಾ ಖೈರೋಜಿ , ಮೋಹನ ಜಾಧವ , ವಿಜಯ ಚವಾನ , ಭಾವಸಾಹೇಬ ಜಾಧವ , ಪ್ರದೀಪ ಜಾಧವ ಸುಧಾಕರ ಭಗತ ಆನಂದ ಪಾಟೀಲ ಸೇರಿ ಅನೇಕ ಮರಾಠಾ ಮುಖಂಡರು ಉಪಸ್ಥಿತರಿದ್ದರು.