Belagavi News In Kannada | News Belgaum

ಅಂಗಡಿ ಇಂಟರನ್ಯಾಷನಲ್ ಸ್ಕೂಲ್, ಬೆಳಗಾವಿ ಅಂಗಡಿ ಇಂಟರನ್ಯಾಷನಲ್ ಸ್ಕೂಲಿನಲ್ಲಿ ಅಟಲ್‍ ಟಿಂಕರಿಂಗ್ ಲ್ಯಾಬ ಉದ್ಘಾಟನೆ

ಅಂಗಡಿಇಂಟರನ್ಯಾಷನಲ್ ಸ್ಕೂಲ್, ಬೆಳಗಾವಿ  ಅಂಗಡಿಇಂಟರನ್ಯಾಷನಲ್ ಸ್ಕೂಲಿನಲ್ಲಿಅಟಲ್‍ಟಿಂಕರಿಂಗ್ ಲ್ಯಾಬ ಉದ್ಘಾಟನೆ
ಆವಿಷ್ಕಾರವು ಇಂದಿನ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಭಾರತವನ್ನು ವಿನೂತನ ವೈಜ್ಞಾನಿಕಕೇಂದ್ರವಾಗಿಉತ್ತೇಜಿಸಲುತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಬೇಕು. ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವವರೆಗೆ ವಿಶ್ರಮಿಸಬಾರದುಎಂದುಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.

 

ಅವರು ನಗರದಅಂಗಡಿಇಂಟರನ್ಯಾಷನಲ್ ಸ್ಕೂಲಿನಲ್ಲಿಕೇಂದ್ರ ಸರ್ಕಾರದ ನೀತಿಆಯೋಗದಅಟಲ್‍ಇನ್ನೊವೇಷನ್ ಮಿಷನ್ ವತಿಯಿಂದ ಸ್ಥಾಪಿಸಲಾದಅಟಲ್‍ಟಿಂಕರಿಂಗ್ ಲ್ಯಾಬನ್ನುಗುರುವಾರ ದಿನಾಂಕ 16.12.2021ರಂದುಉದ್ಘಾಟಿಸಿ ಮಾತನಾಡಿದರು.

 

ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗಾಗಿ ಸ್ಥಾಪಿಸಲಾದಇಂಥ ವಿನೂತನವಾದ ಪ್ರಯೋಗಾಲಯದ ಮುಖಾಂತರ ವೈಜ್ಞಾನಿಕ ಕೌಶಲ್ಯತೆಗಳನ್ನು ಕಲಿತು ಸದುಪಯೋಗಪಡಿಸಿಕೊಂಡು ದೇಶದಅಭಿವೃದ್ಧಿಯಲ್ಲಿ ಕೈ ಜೋಡಿಸಿ ದಿ. ಸುರೇಶಅಂಗಡಿಯವರಕನಸನ್ನು ನನಸು ಮಾಡಬೇಕೆಂದುಕರೆ ನೀಡಿದರು.

ಸಂಸ್ಥೆಯಕಾರ್ಯಾಧ್ಯಕ್ಷೆ ಹಾಗೂ ಸಂಸದೆ ಮಂಗಲ ಸುರೇಶಅಂಗಡಿ, ಸಂಸ್ಥೆಯನಿರ್ದೇಶಕಿಯರಾದಡಾ. ಸ್ಪೂರ್ತಿಅಂಗಡಿ, ಶ್ರದ್ಧಾಅಂಗಡಿ, ಡಿಡಿಪಿಐ ಎ.ಬಿ. ಪುಂಡಲಿಕ, ಬೆಳಗಾವಿ ಗ್ರಾಮಾಂತರದ ಬಿ.ಇ.ಒ. ಆರ್.ಪಿ. ಜುಟ್ಟನವರ್, ಆಡಳಿತಾಧಿಕಾರಿ ರಾಜು ಜೋಶಿ ಉಪಸ್ಥಿತರಿದ್ದರು.

ಸ್ಕೂಲಿನ ಮುಖ್ಯಾಧ್ಯಾಪಕಿ ಆಶಾ ರಜಪೂತ ಮಾತನಾಡಿ, ಈ ಲ್ಯಾಬನ್ನು ನಾವು ಅಟಲ್‍ಇನ್ನೋವೇಶನ್ ಮಿಷನ್‍ನ ಮಾರ್ಗದರ್ಶನದ ಪ್ರಕಾರ ಹೊಂದಿಸಿದ್ದೇವೆ. ಈ ಪ್ರಯೋಗಾಲಯವುಡು-ಇಟ್‍ಯುವರ್ಸೆಲ್ಫ್‍ಕಿಟ್” ಗಳನ್ನು ಹೊಂದಿದೆ. ಇದು ಹೊಸ ಭಾರತದತ್ತಒಂದು ಹೆಜ್ಜೆಯಾಗಿದೆ. ಈ ಲ್ಯಾಬಿನ ಮುಖಾಂತರ ವಿದ್ಯಾರ್ಥಿಗಳಿಗೆ 21 ನೇ ಶತಮಾನದಅಗತ್ಯ ಕೌಶಲ್ಯಗಳನ್ನು ಕಲಿಸುತ್ತದೆ. ಇದುಅವರು ವೃತ್ತಿಪರ ಮತ್ತು ವೈಯಕ್ತಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆಎಂದು ಹೇಳಿದರು.

ಅಟಲ್ ಪ್ರಯೋಗಾಲದ ಪ್ರಭಾರಿ ಶಿಕ್ಷಕಿ ರೂಪಾಲಿ ಹಿರೇಮಠ ಮತ್ತುಎಲ್ಲ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರೂಮ್‍ಕಂಟ್ರೋಲರ್ ಲೈಟ್, ಆ್ಯಂಟಿ ಸ್ಲೀಪ್ ಅಲಾರ್ಮ, ಟ್ರ್ಯಾಕಿಂಗ್‍ಡಿವೈಸ್, ಆಬ್ಜೆಕ್ಟ ಸಾರ್ಟರ್, ಫೈರ್ ಸೇಫ್ಟಿ, ಸ್ಮಾಟ್‍ಡಸ್ಟಬಿನ್, ಅಡೆತಡೆತಪ್ಪಿಸುವ ಸಾಧನಗಳಂತಹ ನವೀನ ಮತ್ತು ಫ್ಯೂಚರಿಸ್ಟಿಕ್ ಮಾದರಿಗಳನ್ನು ಸಿದ್ಧಪಡಿಸಿದರು.