Belagavi News In Kannada | News Belgaum

ಚಿಕ್ಕೋಡಿಗೆ ಸುಸುಜ್ಜಿತ ಡಿಎಚ್ಓ ಮಂಜೂರು: ಸಚಿವ ಡಾ. ಕೆ.ಸುಧಾಕರ ಭರವಸೆ

ಚಿಕ್ಕೋಡಿ: ಚಿಕ್ಕೋಡಿಗೆ ಡಿಎಚ್‍ಓ ಕಚೇರಿ ಮಂಜೂರು ಮಾಡುವ ಜತೆಗೆ ಚಿಕ್ಕೋಡಿ ತಾಲೂಕಿನ ಶಿರಗಾಂವ ಮತ್ತು ಕೋಥಳಿ ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಲಾಗುವುದು” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಸಚಿವ ಡಾ. ಕೆ.ಸುಧಾಕರ ಭರವಸೆ ನೀಡಿದರು.

ತಾಲೂಕಿನ ಅಂಕಲಿಯಲ್ಲಿ 1.70ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಚಿಕ್ಕೋಡಿಯ ಎಡಿಎಚ್‍ಓ ಕಚೇರಿ ಮೇಲ್ದರ್ಜೇಗೇರಿಸಿ ಡಿಎಚ್‍ಓ ಕಚೇರಿಯನ್ನಾಗಿ ಪರಿವರ್ತನೆ ಮಾಡಲಾಗುವುದು. ಅಂಕಲಿ ಪ್ರಾಥಮಿಕ ಆರೋಗ್ಯದ ವೈದ್ಯರು ಮತ್ತು ಸಿಬ್ಬಂದಿಗೆ ಶೀಘ್ರ ವಸತಿ ನಿಲಯಗಳನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಹೇಳಿದರು.

ಚಿಕ್ಕೋಡಿ ತಾಲೂಕಾ ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸಲು ಕ್ರಮ ಜರುಗಿಸಲಾಗುವುದು. 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೇಗೇರಿಸುವ ಮೂಲಕ ಸಶಕ್ತಗೊಳಿಸುವ ಸಲುವಾಗಿ ಸರಕಾರ 6 ರಿಂದ 8 ಕೋಟಿ ರೂ.ಗಳ ಅನುದಾನ  ಖರ್ಚು ಮಾಡುತ್ತಿದೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ 522 ಕೋಟಿ ರೂ.ಗಳ ಅನುದಾನ ಬಂದಿದೆ. ಇದರಿಂದ ಆರೋಗ್ಯ ಇಲಾಖೆಗೆ ಇನ್ನಷ್ಟು ವೈದ್ಯರು ಸೇರಿದಂತೆ ಮೂಲ ಭೂತ ಸೌಕರ್ಯ ಒದಗಿಸುವ ಮುಖಾಂತರ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

ಮಾಜಿ ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ, ಗಡಿಯಲ್ಲಿರುವ ಅಂಕಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯಾವುದೇ ಸೌಲಭ್ಯವಿಲ್ಲ. ಸುಮಾರು ಎರಡೂವರೆ ಎಕರೆ ಜಮೀನು ಇದೆ. ಇಲ್ಲಿ 20 ಹಾಸಿಗೆ ಆಸ್ಪತ್ರೆ ಮತ್ತು ಒಂದು ಅಂಬ್ಯಲೆನ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿದರು.

ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ-ಸದಲಗಾ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ ಅಗತ್ಯವಿರುವ ಕೆಲವನ್ನು ಸಮುದಾಯ ಆರೋಗ್ಯ ಕೇಂದ್ರ ಮಾಡಬೇಕು. ಕೋಥಳಿ ಮತ್ತು ಶಿರಗಾಂವ ಗ್ರಾಮಗಳೀಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕೇಂದ್ರ ಸ್ಥಾನಮಾನ ಪಡೆಯಲು ಅನುಕೂವಾಗುವ ನಿಟ್ಟಿನಲ್ಲಿ ಚಿಕ್ಕೋಡಿಯಲ್ಲಿರುವ ಎಡಿಎಚ್‍ಓ ಕಚೇರಿಯನ್ನು ಡಿಎಚ್‍ಓ ಕಚೇರಿಯನ್ನಾಗಿ ಮಾಡಬೇಕು. ಈಗಾಗಲೇ ಡಿಎಚ್‍ಓ ಕಚೇರಿಗೆ 4ಎಕರೆ ಭೂಮಿ ಮತ್ತು 2.50 ಕೋಟಿ ರೂ,ಗಳ ಅನುದಾನ ಮಂಜೂರು ಮಾಡಿಸಲಾಗಿದೆ. ಆದ್ದರಿಂದ ಶೀಘ್ರ ಚಿಕ್ಕೋಡಿಗೆ ಡಿಎಚ್‍ಓ ಕಚೇರಿ ಮಂಜೂರು ಮಾಡುವಂತೆ ಒತ್ತಾಯಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಪ್ರವಾಹ ಬಂದ ಸಂದರ್ಭದಲ್ಲಿ ಮತ್ತು ಕೋವಿಡ್ ಸಂದರ್ಭದಲ್ಲಿ ಅಣ್ಣಪೂಣೇಶ್ವೇರಿ ಫೌಂಡೇಶನ್ ವತಿಯಿಂದ 12000ಜನರಿಗೆ ಉಚಿತ ಕೋವಿಡ್ ಲಸಿಕೆ ಕೊಡಿಸುವ ಮಹತ್ತರ ಕಾರ್ಯ ಮಾಡಿದ್ದು, ಜತೆಗೆ ವೈದ್ಯರ ಕೊರತೆ ಇರುವ ಕಡೆಗೆ ವೈದ್ಯರನ್ನು ಮತ್ತು ನರ್ಸ್‍ಗಳನ್ನು ಸಹ ಅನ್ನಪೂಣೇಶ್ವರಿ ಪೌಂಡೇಶನ್ ವತಿಯಿಂದ ಒದಗಿಸುವ ಮೂಲಕ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಕಾರ್ಯ ಮಾಡಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್‍ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭರತೇಶ ಬನವಣೆ, ಮಲ್ಲಿಕಾರ್ಜುನ ಕೋರೆ, ಡಾ.ಎನ್.ಎ.ಮಗದುಮ್ಮ, ಡಾ. ರಾಜೇಶ ನೇರ್ಲಿ, ಗ್ರಾ.ಪಂ.ಅಧ್ಯಕ್ಷ ಶೈಲಜಾ ಸುರೇಶ ಪಾಟೀಲ, ಡಿಎಚ್‍ಓ ಡಾ. ಎಚ್.ವಿ.ಮುನ್ಯಾಳ, ಅಪ್ಪಾಸಾಬ ನರಹಟ್ಟಿ, ಎಡಿಎಚ್‍ಓ ಡಾ. ಎಸ್.ಎಸ್.ಗಡೇದ, ಆರೋಗ್ಯ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷ ಬಿ.ಎ.ಕುಂಬಾರ, ನವೀನ ಗಂಗರೆಡ್ಡಿ, ಡಾ. ಸಂತೋಷ ಕೊಣ್ಣೂರೆ, ಡಾ. ಮಹೇಶ ಕುಂಬಾರ, ಡಾ. ಪ್ರಭು ಬಿರಾದಾರ ಹಾಗೂ ಇತರರು ಇದ್ದರು.//////