Belagavi News In Kannada | News Belgaum

ಯುವತಿರನ್ನು ವೇಶ್ಯಾವಾಟಿಕೆ ದಂಧೆಗೆ ನೂಕುತಿದ್ದ ಮೂವರು ಅರೆಸ್ಟ್

ಬೆಂಗಳೂರು: ಕೆಲಸ ಹಾಗೂ ಹಣದ ಆಮಿಷಯೊಡ್ಡಿ ಯುವತಿರನ್ನು ವೇಶ್ಯಾವಾಟಿಕೆ ದಂಧೆಗೆ ನೂಕುತಿದ್ದ ಅಡ್ಡೆ ಮೇಲೆ  ಪೊಲೀಸ್ ರು  ದಾಳಿ  ನಡೆಸಿ, ಯುವತಿರನ್ನು ರಕ್ಷಿಸಿ, ಮೂರವರನ್ನು ವಶಕ್ಕೆ ಪಡೆಲಾಗಿದೆ.

ಸೋಮೇಗೌಡ(25) , ಜಯಕುಮಾರ್ (32) , ಭವಾನಿ (25) ಬಂಧಿತರು ಆರೋಪಿಗಳು. 24 ವರ್ಷದ ಯುವತಿಗೆ ಕೆಲಸದ ಆಮಿಷವೊಡ್ಡಿ ಆಕೆಯನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು.

ಬಾಡಿಗೆ ಮನೆಯಲ್ಲಿ ಯುವತಿಯನ್ನಿಟ್ಟು ಫೋನ್ ಕಾಲ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ದಂಧೆ ನಡೆಸುತ್ತಿದ್ದರು. ಮಹಿಳೆ ಭವಾನಿ ಹಾಗೂ ಸೋಮೇಗೌಡ ಹಾಗೂ ಜಯಕುಮಾರ್ ಬಡ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ಹೇಳಿ ಕರೆತಂದು ಸೋಮೇಗೌಡನ ಮನೆಯಲ್ಲಿಯೇ ನೆಲಮಹಡಿಯಲ್ಲಿ ಮನೆ ಬಾಡಿಗೆಗೆ ಎಂದು ಹೇಳಿ ಯುವತಿಯರನ್ನಿಟ್ಟು ದಂಧೆ ನಡೆಸುತ್ತಿದ್ದರು.

ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////