Belagavi News In Kannada | News Belgaum

ಸೌಹಾರ್ದತೆಯಿಂದ ಇರುವ ಇಚ್ಛಾಶಕ್ತಿ ಬಿಜೆಪಿಯವರಿಗಿಲ್ಲ : ಸತೀಶ್ ಜಾರಕಿಹೊಳಿ

ಬೆಳಗಾವಿ:  ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಇರುವ ಇಚ್ಛಾ ಶಕ್ತಿ ಬಿಜೆಪಿಯವರಿಗೆ ಇಲ್ಲಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ಬೆಳಾಗಾವಿಯಲ್ಲಿ ಭಾರತೀಯ ಕ್ರೈಸ್ತ ಒಕ್ಕೂಟ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಾತಿ-ಧರ್ಮದಲ್ಲಿ ಭೇದಬಾವ ಮಾಡುವುದು ಬಿಜೆಪಿ ಕೆಲಸವಾಗಿದೆ. ಆದ್ದರಿಂದ ಇವತ್ತಿನ ಸಂದರ್ಭದಲ್ಲಿ ಒಗ್ಗಟ್ಟು ಮುಖ್ಯವಾಗಿದ್ದು, ನಾವು ಒಗ್ಗಟ್ಟಿನಿಂದ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದರು.

ಈಚೆಗೆ ಚರ್ಚೆಗಳ ಮೇಲೆ ದಾಳಿ ನಡೆಯುತ್ತಿವೆ. ಅದನ್ನು ತಡೆಗಟ್ಟಲು ನೀವು ಪ್ರಯತ್ನಿಸಬೇಕು. ನಿಮ್ಮ ರಕ್ಷಣೆಗೆ ನಾವು, ನಮ್ಮ ಪಕ್ಷ ನಿರಂತರವಾಗಿ ಇರುತ್ತದೆ ಎಂದು ಭರವಸೆ ನೀಡಿದರು.

ಬುದ್ದ, ಬಸವ, ಅಂಬೇಡ್ಕರ್ ಅವರ ಬಗ್ಗೆ ನೀವು ಚರ್ಚೆಗಳಲ್ಲಿ ಯುವಕರಿಗೆ ಅರಿವು ಮೂಡಿಸಬೇಕು. ಆ ಅರಿವಿನಿಂದ ಅವರು ಸಂವಿಧಾನ ಮೂಲಕ ನಿಮ್ಮ ರಕ್ಷಣೆ ಮಾಡುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಡಾ. ಸಜ್ಜನ್ ಜಾರ್ಜ್, ಐವಾನ ಡಿಸೋಜಾ, ಪುಷ್ಪಾ, ಪ್ರಕಾಶ್ ರಾಥೋಡ್, ವಿಜಯಸಿಂಗ್ ಸೇರಿದಂತೆ ಇತರರು ಇದ್ದರು./////