Belagavi News In Kannada | News Belgaum

ಶಿಕ್ಷಕರ ವರ್ಗಾವಣೆಯ ಕೌನ್ಸಲಿಂಗ್ ಸ್ಥಳ ಬದಲಾವಣೆ

ಬೆಳಗಾವಿ, ಡಿ.17  :  2020-21 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ, ಜಿಲ್ಲೆಯ ಹೊರಗಿನ ವಿಭಾಗದೊಳಗಿನ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಗ್ರೇಡ್-2 ಹಾಗೂ ವಿಶೇಷ ಶಿಕ್ಷಕರ ಕೋರಿಕೆ ವರ್ಗಾವಣೆಯ ಗಣಕೀಕೃತ ಕೌನ್ಸ್ ಲಿಂಗ್ ಸ್ಥಳ ಬದಲಾವಣೆ ಮಾಡಲಾಗಿದೆ.

ಬೆಳಗಾವಿಯ ಕ್ಯಾಂಪ್, ಕೇಂದ್ರ ಅಂಚೆ ಕಚೇರಿ ಹತ್ತಿರದ ಬಿ.ಕೆ ಮಾಡೆಲ್ ಪ್ರೌಢಶಾಲೆಯಲ್ಲಿ ಡಿ.19 ರಂದು ನಿಗದಿಪಡಿಸಲಾಗಿತ್ತು.

ಕೆ.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆ ಜರುಗಲಿರುವ ಕಾರಣದಿಂದ ಸದರಿ ಕೌನ್ಸಲಿಂಗ್ ಭಾನುವಾರ (ಡಿ.19) ಬೆಳಗಾವಿಯ ಕಾಕತಿವೇಸ್, ಚೆನ್ನಮ್ಮ ಸರ್ಕಲ್ ಹತ್ತಿರದ ಸರ್ಕಾರಿ ಸರದಾರ ಪ್ರೌಢ ಶಾಲೆಯಲ್ಲಿ ಬದಲಾವಣೆ ಮಾಡಿ ನಿಗದಿಪಡಿಸಲಾಗಿದೆ.

ಸದರಿ ದಿನಾಂಕದಂದು ಮಾತ್ರ ಶಿಕ್ಷಕರು ಬದಲಾವಣೆಯಾದ ಕೌನ್ಸಲಿಂಗ್ ಸ್ಥಳಕ್ಕೆ ಹಾಜರಾಗಬೇಕು ಹಾಗೂ ಉಳಿದಂತೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬೆಳಗಾವಿಯ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪದನಿಮಿತ್ತ ಸಹನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ