Belagavi News In Kannada | News Belgaum

ಭಾರತದ ಹಣದುಬ್ಬರ, ನೋವಿಗೆ ಹಿಂದುತ್ವವಾದಿಗಳೇ ಕಾರಣ: ರಾಹುಲ್ ಗಾಂಧಿ

ನವದೆಹಲಿ/ ಅಮೇಥಿ: ಚುನಾವಣಾ ಅಖಾಡ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಅಮೇಥಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಈ ವೇಳೆ ಹಿಂದುತ್ವದ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಅವರು, ಭಾರತದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ನೋವು, ಹತಾಶೆಗೆಲ್ಲ ಹಿಂದುತ್ವವಾದಿಗಳೇ ನೇರ ಕಾರಣ ಎಂದು ಕಿಡಿ ಕಾರಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್​ ಭದ್ರಕೋಟೆಯಾಗಿರುವ ಅಮೇಥಿಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಇಂದು ನಮ್ಮ ದೇಶದಲ್ಲಿ ನೋವು, ದುಃಖ ಹೆಚ್ಚಾಗಿದ್ದರೆ ಅದಕ್ಕೆ ಹಿಂದುತ್ವವಾದಿಗಳೇ ಕಾರಣ. ಇಂದು ಹಿಂದೂಗಳು ಮತ್ತು ಹಿಂದುತ್ವವಾದಿಗಳ ನಡುವೆ ಕದನವಾಗುತ್ತಿದೆ. ಹಿಂದೂಗಳು ಸತ್ಯಾಗ್ರಹವನ್ನು ನಂಬಿದರೆ, ಹಿಂದುತ್ವವಾದಿಗಳು ಕೇವಲ “ಸತ್ತಾಗ್ರಹ” ನಂಬುತ್ತಾರೆ ಎಂದು ಹೇಳಿದ್ದಾರೆ./////