Belagavi News In Kannada | News Belgaum

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಪ್ರತಿಕೃತಿಯನ್ನು ದಹಿಸಿ ಕರವೇ ಆಕ್ರೋಶ

ಶೇಡಬಾಳ : ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಶಿವಸೇನಾ ಗುಂಡಾಗಳು ಕರ್ನಾಟಕ ಧ್ವಜಕ್ಕೆ ಬೆಂಕಿ ಹಚ್ಚಿರುವುದನ್ನು ಪ್ರತಿಭಟಿಸಿ ಕಾಗವಾಡ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಪ್ರತಿಕೃತಿಯನ್ನು ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ದಿ. 18 ರಂದು ಕಾಗವಾಡದ ಚೆನ್ನಮ್ಮ ಸರ್ಕಲ್‍ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾಗವಾಡ ತಾಲೂಕಾಧ್ಯಕ್ಷ ಸಿದ್ದು ವಡೇಯರ ಹಾಗೂ ಶಿವಾನಂದ ನವನ್ಯಾಳ ಇವರ ನೇತೃತ್ವದಲ್ಲಿ ಒಂದುಗೂಡಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶಿವಸೇನಾ ಗುಂಡಾಗಳ ಕೃತ್ಯವನ್ನು ಖಂಡಿಸಿ ಧಿಕ್ಕಾರಗಳನ್ನು ಕೂಗುತ್ತಾ ಶಿವಸೇನಾ ಮುಖಂಡ ಉದ್ಧವ ಠಾಕ್ರೆ ಅವರ ಪ್ರತಿಕೃತಯನ್ನು ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಸಿದ್ದು ವಡೇಯರ ಹಾಗೂ ಶಿವಾನಂದ ನವನ್ಯಾಳ ಮಾತನಾಡಿ ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗವಾಗಿದ್ದು ಸೂರ್ಯ-ಚಂದ್ರ ಇರುವ ವರೆಗೆ ಬೆಳಗಾವಿ ನಮ್ಮದೇ. ಎಂಇಎಸ್ ಹಾಗೂ ಶಿವಸೇನಾ ಗುಂಡಾಗಳು ಕರ್ನಾಟಕದ ಗೋಜಿಗೆ ಬಂದರೆ ಸುಮ್ಮನೆ ಇರಲಿಕ್ಕೆ ಆಗದು. ಇದೇ ರೀತಿ ಶಿವಸೇನೆ ಗುಂಡಾಗಳು ವರ್ತಿಸಿದರೆ ಸ್ವಾಭಿಮಾನಿ ಕನ್ನಡಿಗರು ಅವರಿಗೆ ತಕ್ಕ ಪಾಠ ಕಲಿಸುತ್ತೇವೆಂದು ಎಚ್ಚರಿಕೆ ನೀಡಿದರು.
ಈ ಕೃತ್ಯವನ್ನು ಖಂಡಿಸಿ ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ಹಾಗೂ ಡಿವಾಯ್‍ಎಸ್‍ಪಿ ಗೀರೀಶ, ಕಾಗವಾಡ ಪಿಎಸ್‍ಐ ಅವರಿಗೆ ಮನವಿ ಪತ್ರ ಅರ್ಪಿಸಿ ಕರ್ನಾಟಕ ಧ್ವಜಕ್ಕೆ ಅವಮಾನ ಮಾಡಿದ ಗುಂಡಾಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ಈ ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾಗವಾಡ ತಾಲೂಕಾಧ್ಯಕ್ಷ ಸಿದ್ದು ವಡೇಯರ, ಶಿವಾನಂದ ನವನ್ಯಾಳ, ಗಣೇಶ ಕೋಳೆಕರ, ಪಾರುಕ ಅಲಾಸ್ಕರ, ಅಮೀತ ಗಣೆ, ದಯಾನಂದ ಕೊಳಲಗಿ, ರಾಜು ಪಾಟೀಲ, ಪ್ರವೀಣ ಪಾಟೀಲ, ಮಹಾಂತೇಶ ಬಡಿಗೇರ, ಸಚಿನ ಪಾಟೀಲ, ವಿನಾಯಕ ಚೌಗಲಾ, ಪ್ರಶಾಂತ ಖೋತ, ರಾಮು ವಡ್ಡರ ಸೇರಿದಂತೆ ಅನೇಕರು ಇದ್ದರು. ಕಾಗವಾಡ ಪೋಲಿಸ್‍ರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು./////