Belagavi News In Kannada | News Belgaum

ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಮಲಗಲದಿನ್ನಿ ನೇಮಕ

ಹುಣಸಗಿ : ಭಾರತೀಯ ಯುವ ಕಾಂಗ್ರೆಸ್ ಯಾದಗಿರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯಾಗಿ, ಹುಣಸಗಿ ಪಟ್ಟಣದ ಯುವ ಮುಖಂಡ ಅರುಣಕುಮಾರ್ ಶಂಕ್ರಣ್ಣ ಮಲಗಲದಿನ್ನಿ, ಅವರನ್ನು ನೇಮಕ ಮಾಡಿ ಕೆಪಿವೈಸಿ ರಾಜ್ಯಧ್ಯಕ್ಷ ರಕ್ಷಾ ರಾಮಯ್ಯ ಅದೇಸಿಸಿದ್ದಾರೆ.

 

ಈ ಹಿಂದೆ ಸುರಪೂರ ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ಯಾಗಿ ಯುವ ಮುಖಂಡ ಕೆಲಸ ಮಾಡಿದ್ದರು. ನಂತರ ಮಾತನಾಡಿದ ಯುವ ಮುಖಂಡ ಅರುಣ್ ಮಲಗಲದಿನ್ನಿ ಅವರು ಪಕ್ಷವು ನಮ್ಮ ಮೇಲೆ ಜವಾಬ್ದಾರಿ ಯುತ ಸ್ಥಾನಮಾನ ನೀಡಿದ್ದಾರೆ ಪಕ್ಷಸಂಘಟನೆ ಯಲ್ಲಿ,

 

ತೊಡಗಿಕೊಂಡು, ಮುಂದಿನ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಅವರನ್ನು ಶಾಸಕರಾಗಿ ಮಾಡಲು ಹಗಲಿರುಳು ಎನ್ನದೆ ಪ್ರಯತ್ನ ಮಾಡಲಾಗುವುದು, ಹಾಗೂ ನನ್ನನ್ನು ಹುದ್ದೆಗೆ ಆಯ್ಕೆಯಾಗಲು ಕಾರಣಿಭೂತರಾದ ಮಾಜಿ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಹಾಗೂ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಜಾ ಕುಮಾರ ನಾಯಕ ಅವರಿಗೆ ಅಭಿನಂದನೆಗಳು ಸಲ್ಲಿಸಿದರು. ವರದಿ ಸಿದ್ದನಗೌಡ ಎನ್ ಬಿರಾದಾರ