Belagavi News In Kannada | News Belgaum

NHM ಆಯುಷ್ ವೈದ್ಯರಿಗೆ ಸಮಾನ ವೇತನ ನೀಡಲು ಒತ್ತಾಯ

ಚಿಕ್ಕೋಡಿ : ರಾಜ್ಯ ಸರಕಾರದಲ್ಲಿ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ಮಾಡುತ್ತಿರುವ ಆಯುಷ್ ವೈದ್ಯರಿಗೆ ಸಮಾನ ಕೆಲಸಕ್ಕೆ ಸಮಾನ  ವೇತನ ನೀಡದೆ ರಾಜ್ಯ ಸರಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆಯುಷ್ ವೈದ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಎನ್‍ಎಚ್‍ಎಂ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರು  ಕಳೆದ 16 ವರ್ಷಗಳಿಂದ ಜೀತದಾಳುಗಳಂತೆ ಜೀವನ ಸಾಗಿಸುತ್ತಿದ್ದಾರೆ. ಸರಕಾರದ ಅನೇಕ ಇಲಾಖೆಗಳಲ್ಲಿ ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತಿದೆ. ಆಯುಷ್ ಇಲಾಖೆ ವ್ಶೆದ್ಯರಿಗೆ ಮಾತ್ರ ಸಮಾನ ವೇತನ ನೀಡುತ್ತಿಲ್ಲ ಎಂದು ಆಯುಷ್ ವೈದ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದೀಗ ಹೊರಗುತ್ತಿಗೆ ಆಯುಷ್ ವ್ಶೆದ್ಯರಿಗೆ ಕೇವಲ ಮಾಸಿಕ 23 ಸಾವಿರ ವೇತನ ನೀಡಲಾಗುತ್ತಿದೆ. ಇಷ್ಟು ಕಡಿಮೆ ವೇತನದಲ್ಲಿ ಕುಟಂಬ ನಿರ್ವಹಣೆ ಮಾಡುವದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಸರಕಾರಿ ಆಯುಷ್ ಚಿಕಿತ್ಸಾಲಾಯದ ಆಯುಷ್ ವೈದ್ಯರು ಮಾಸಿಕ ಮೂಲ ವೇತನವನ್ನಾಗಿ 56 ಸಾವಿರ ವೇತನವನ್ನು ಸರಕಾರ ನೀಡುತ್ತಿದೆ. ಇಬ್ಬರು ವೈದ್ಯರು ಅವರಷ್ಟೆ ಕೆಲಸ ಮಾಡುತ್ತಿದ್ದರೂ ಈ ತಾರತ್ಯಮ ಏಕೆ ಎಂದು ಪ್ರಶ್ನಿಸಿದ್ದಾರೆ. ಸರ್ವೊಚ್ಚ ನ್ಯಾಯಾಲಯ ಸಹ ಸಮಾನ ಕೆಲಸಕ್ಕೆ ಸಮಾನ ವೇತನ  ನೀಡಲು ಸಾಕಷ್ಟು ಬಾರಿ ಆದೇಶ ಮಾಡಿದೆ. ಆದರೆ ಎನ್‍ಎಚ್‍ಎಮ್ ಆಯುಷ್ ವ್ಶೆದ್ಯರಿಗೆ ಸಮಾನ ವೇತನ ನೀಡುತ್ತಿಲ್ಲ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಚಲಿಗಾಲ ಅಧಿವೇಶನದಲ್ಲಿ ಸರಕಾರ ಇದರ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.

ಕೋವಿಡ್ ಮೊದಲನೆ ಅಲೆಯಲ್ಲಿ  ಆಯುಷ್ ವೈದ್ಯರು ಸಹ ತಮ್ಮ ಜೀವ ಒತ್ತೆಯಿಟ್ಟು ಕಾರ್ಯ ಮಾಡಿದ್ದಾರೆ. ಆವಾಗ ಆರೋಗ್ಯ ಸಚಿವ ಡಾ.ಸುಧಾಕರ ಅವರು ಎಲ್ಲಾ ಗುತ್ತಿಗೆ ಆಯುಷ್ ವೈದ್ಯರಿಗೆ 45 ಸಾವಿರ ವೇತನ ಹೆಚ್ಚಿಸುವದಾಗಿ ತಿಳಿಸಿದ್ದರು. ಇದುವರೆಗೆ ಕೊಟ್ಟ ಮಾತಿನಂತೆ ಸಚಿವರು ನಡೆದುಕೊಂಡಿಲ್ಲ. ಕನಿಷ್ಠ ವೇತನ ಕಾಯ್ದೆಯನ್ವಯ ವೇತನವನ್ನು ಸಹ ನೀಡುತ್ತಿಲ್ಲ ಈ ಕುರಿತು ಆಯುಷ್ ವೈದ್ಯರು ಸಾಕಷ್ಟು ಬಾರಿ ಸರಕಾರದ ಗಮನಕ್ಕೆ ತಂದರೂ ಮಲತಾಯಿ ಧೊರಣೆ ಮುಂದುವರೆಸುತ್ತಲೆ ಬಂದಿದೆ. ಕೊರೊನಾ ವಾರಿಯರ್ಸ್ ಆಗಿ ಕಾರ್ಯ ಮಾಡಿರುವ ಎನ್‍ಎಚ್‍ಎಂ ಆಯುಷ್ ವೈದ್ಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿದ್ದಾರೆ.

ಬಾರದ ಭತ್ಯೆ: ಅಲ್ಲದೆ ರಾಜ್ಯ ಸರಕಾರ ಕೊರೊನಾ ವಾರಿಯರ್ಸ್‍ಗಳಿಗೆ  ಕೊರೊನಾ ಕೋವಿಡ್ ಭತ್ಯೆಯನ್ನು ನೀಡಿಲ್ಲ. ಇಗಲಾದರು ಸರಕಾರ ಇದರ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.   //////