Belagavi News In Kannada | News Belgaum

ರಾಯಣ್ಣನ ಮೂರ್ತಿ ಭಗ್ನಗೊಳಿಸಿದ ಸ್ಥಳದಲ್ಲೇ ಮರು ಪ್ರತಿಷ್ಠಾಪನೆ ಮಾಡಿದ ಕನ್ನಡಿಗರು

ಬೆಳಗಾವಿಯ ಕನಕದಾಸ ಕಾಲೋನಿಯಲ್ಲಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಸೆಡ್ಡು ಹೊಡೆಯುವಂತೆ ಅದೇ ಸ್ಥಳದಲ್ಲಿ ಮತ್ತೆ ರಾಯಣ್ಣನ ಮೂರ್ತಿಯನ್ನು ಮರು

ಮಾಡುವ ಮೂಲಕ ಜನತೆ ಅಭಿಮಾನ ಮೆರೆದಿದ್ದಾರೆ.

ಬೆಳಗಾವಿ ಅನಗೋಳದ ಕನಕದಾಸ ಕಾಲೋನಿಯಲ್ಲಿ ಕಿಡಿಗೇಡಿಗಳು ರಾಯಣ್ಣನ ಮೂರ್ತಿ ವಿರೂಪಗೊಳಿಸಿದ್ದ ಹಿನ್ನೆಲೆಯಲ್ಲಿ, ಇಂದು ಕನಕದಾಸ ಕಾಲೋನಿಯಲ್ಲಿ ಸಾವಿರಾರು ಸಂಖ್ಯಯಲ್ಲಿ ಸ್ಥಳೀಯರು ಹಾಗೂ ರಾಯಣ್ಣನ ಅಭಿಮಾನಿಗಳು ಸೇರಿಕೊಂಡು ಮತ್ತೆ ಅದೇ ಸ್ಥಳದಲ್ಲಿ 6ಅಡಿ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಮರು ಪ್ರತಿಷ್ಠಾಪನೆ  ಮಾಡಿದ್ದಾರೆ.

 

ಈ ವೇಳೆ ರಾಯಣ್ಣನ ಮೂರ್ತಿಗೆ ಕ್ಷೀರಾಭಿಷೇಕ ಮಾಡಲಾಯಿತು. ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಸ್ಥಳೀಯರಲ್ಲಿ ಹಾಗೂ ರಾಯಣ್ಣನ ಅಭಿಮಾನಿಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

 

ಈ ವೇಳೆ ನೂರಾರು ಜನ ಮಹಿಳೆಯರು ಕುಂಭಮೇಳ ಹೊತ್ತ ತಾಯಂದಿರು ರಾಯಣ್ಣನ ಮೂರ್ತಿಗೆ ಜಲಾಭಿಷೇಕ ಮಾಡಿದರು.

 

ಈ ಸಂದರ್ಭದಲ್ಲಿ ಕ್ಷೀರಾಭಿಷೇಕ ಹಾಗೂ ಪೂಜೆ ಸಲ್ಲಿಸಿ ಮರು ಪ್ರತಿಷ್ಠಾಪನೆ ಮಾಡಲಾಯಿತು. ಈ ವೇಳೆ ಜೈ ಜೈ ರಾಯಣ್ಣ ಜೈ ಜೈ ಚನ್ನಮ್ಮ, ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಎಂದು ಘೋಷಣೆ ಮುಗಿಲು ಮುಟ್ಟಿತ್ತು. ಕನ್ನಡಿಗರಿಗೆ ಕುಷಿ ತಂದಿದ್ದಂತೂ ಸತ್ಯ ಇನ್ನು ಸ್ಥಳದಲ್ಲಿ ಬಿಗಿ ಪೋಲೀಸ್ ಭದ್ರತೆ ಮಾಡಲಾಗಿತ್ತು.