Belagavi News In Kannada | News Belgaum

ಡಿ.21 ಅರಣ್ಯ ಇಲಾಖೆ ವತಿಯಿಂದ ಸಮಾಲೋಚನೆ ಸಭೆ ಆಸಕ್ತಿ ಉಳ್ಳವರು ಸಭೆಯ ಪೂರ್ವದಲ್ಲಿ ಮೊಬೈಲ್ ಸಂಖ್ಯೆ 9036596611 ಇಲ್ಲಿಗೆ ಕರೆಮಾಡಿ

 

ಬೆಳಗಾವಿ ಡಿ. 18 : ಕರ್ನಾಟಕ ಅರಣ್ಯ ಇಲಾಖೆಯ ಕರಡು ಕರ್ನಾಟಕ ರಾಜ್ಯ ಶ್ರೀಗಂಧ ಪ್ರವರ್ಧನಾ ನೀತಿ 2021 ನ್ನು ಸಿದ್ದಪಡಿಸಿ ಜಾರಿಗೆ ತರಲು ಇಚ್ಚಿಸಿರುತ್ತದೆ. ಮರಗಳ ಕತ್ರಾವಣೆ ಮತ್ತು ಸಾಗಾಣಿಕೆಗೆ ವಿನಾಯಿತಿ ನೀಡುವ ಕುರಿತು ಸಹ ಕೆಲವೊಂದು ಮಾರ್ಪಾಡುಗಳನ್ನು ತರಲು ಅರಣ್ಯ ಇಲಾಖೆಯು ಉದ್ದೇಶಿಸಿದ್ದು,ಡಿ. 21 ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯಲ್ಲಿ ಸಮಾಲೋಚನೆ ಸಭೆಯನ್ನು ಏರ್ಪಡಿಸಲಾಗಿದೆ.
ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಸಕ್ರಿಯವಾಗಿ ತೊಡಗಿಸಿಕೊಂಡವರಿಗೆ ಅನಿಸಿಕೆ ಮತ್ತು ಸಲಹೆಗಳನ್ನು ಪಡೆಯಲು ಕರ್ನಾಟಕ ಸರ್ಕಾರದ ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಸಭೆ ನಡೆಸಲಿದ್ದಾರೆ.
ಆಸಕ್ತಿಯುಳ್ಳ ರೈತರು ಶ್ರೀಗಂಧ ಬೆಳೆಗಾರರು ಮತ್ತು ಸಂಬಂಧಿತ ಸಂಘ ಸಂಸ್ಥೆಗಳನ್ನು ಸದರಿ ಸಮಾಲೋಚನೆ ಸಭೆಗೆ ಆಹ್ವಾನಿಸಲಾಗಿದೆ.
ಕೋವಿಡ್-19 ಕಾರಣ ಹೆಚ್ಚು ಜನ ಸೇರಲು ನಿರ್ಬಂಧವಿರುವುದರಿಂದ, ಸಮಾಲೋಚನೆ ಸಭೆಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಸಭೆಯ ಪೂರ್ವದಲ್ಲಿ ಮೊಬೈಲ್ ಸಂಖ್ಯೆ 9036596611 ಇಲ್ಲಿಗೆ ಕರೆಮಾಡಿ ನೊಂದಾಯಿಸಿಕೊಳ್ಳತಕ್ಕದ್ದು, ನೊಂದಾಯಿತರು ಮಾತ್ರ ಮಾತ್ರ ಸಭೆಯಲ್ಲಿ ಭಾಗವಹಿಸಬಹುದಾಗಿರುತ್ತದೆ.